ಕೇಂದ್ರ ಸಾಹಿತ್ಯ ಅಕಾಡೆಮಿಗೆ ನಾಲ್ವರ ನಾಮನಿರ್ದೇಶನ

7

ಕೇಂದ್ರ ಸಾಹಿತ್ಯ ಅಕಾಡೆಮಿಗೆ ನಾಲ್ವರ ನಾಮನಿರ್ದೇಶನ

Published:
Updated:
ಕೇಂದ್ರ ಸಾಹಿತ್ಯ ಅಕಾಡೆಮಿಗೆ ನಾಲ್ವರ ನಾಮನಿರ್ದೇಶನ

ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕವಿ ಡಾ.ಸಿದ್ದಲಿಂಗಯ್ಯ ಸಹಿತ ರಾಜ್ಯದ ನಾಲ್ವರನ್ನು ನಾಮನಿರ್ದೇಶನ ಮಾಡಲಾಗಿದೆ.

ಸಾಹಿತಿಗಳಾದ ಬಾಳಾಸಾಹೇಬ ಲೋಕಾಪುರೆ, ಸರಜೂ ಕಾಟ್ಕರ್‌ ಅವರೂ ಸಹ ಕನ್ನಡ ಭಾಷೆ ಪ್ರತಿನಿಧಿಗಳಾಗಿ ನಾಮನಿರ್ದೇಶನ ಮಾಡಲಾಗಿದೆ.

ಹಿಂದೆ ಭಾಷೆ ಪ್ರತಿನಿಧಿಯಾಗಿ ಕರ್ನಾಟಕದವರಾದ, ಪ್ರಸ್ತುತ ಮಧ್ಯಪ್ರದೇಶದಲ್ಲಿನ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಕುಲಪತಿ ಡಾ.ವಿ.ತೇಜಸ್ವಿ ಕಟ್ಟೀಮನಿ ನಾಮನಿರ್ದೇಶನಗೊಂಡಿದ್ದಾರೆ.

‘ಅಕಾಡೆಮಿ ಸದಸ್ಯರಾಗಿ ರಾಜ್ಯದ ನಾಲ್ವರು ನಾಮನಿರ್ದೇಶನ ಆಗಿರುವುದು ಕನ್ನಡಿಗರಿಗೆ ಸಂತೋಷದ ಸಂಗತಿ. ಎರಡನೇ ಬಾರಿಗೆ ಸಿದ್ದಲಿಂಗಯ್ಯ ಸದಸ್ಯರಾಗಿದ್ದಾರೆ. ಪರಿಷತ್ತಿನ ಪರವಾಗಿ ಎಲ್ಲರನ್ನೂ ಅಭಿನಂದಿಸುತ್ತೇನೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನು ಬಳಿಗಾರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry