ನಂಜುಂಡಿ ಆಭರಣ ಮಳಿಗೆಗಳಲ್ಲಿ ಐ.ಟಿ ಶೋಧ

7

ನಂಜುಂಡಿ ಆಭರಣ ಮಳಿಗೆಗಳಲ್ಲಿ ಐ.ಟಿ ಶೋಧ

Published:
Updated:

ಬೆಂಗಳೂರು: ಉದ್ಯಮಿ ಹಾಗೂ ಬಿಜೆಪಿ ಮುಖಂಡ ಕೆ.ಪಿ. ನಂಜುಂಡಿ ಮಾಲೀಕತ್ವದ ಲಕ್ಷ್ಮೀಗೋಲ್ಡ್ ಪ್ಯಾಲೇಸ್ ಸೇರಿ ನಾಲ್ಕು ಪ್ರಮುಖ ಆಭರಣ ಮಳಿಗೆಗಳಲ್ಲಿ ಆದಾಯ ತೆರಿಗೆ(ಐ.ಟಿ) ಇಲಾಖೆ ಅಧಿಕಾರಿಗಳು ಗುರುವಾರ ಶೋಧ ನಡೆಸಿದರು.

ಲಕ್ಷ್ಮೀ ಗೋಲ್ಡ್ ಪ್ಯಾಲೆಸ್, ಶ್ರೀ ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್, ವಿಜಯ ಜೆಮ್ಸ್ ಅಂಡ್ ಜುವೆಲರ್ಸ್ ಮತ್ತು ಶ್ರೀ ಕೃಷ್ಣ ಡೈಮಂಡ್ಸ್‌ ಮಳಿಗೆಗಳಲ್ಲಿ ತಪಾಸಣೆ ನಡೆಸಲಾಗಿದೆ.

ಶೋಧದ ವೇಳೆ ಅಧಿಕಾರಿಗಳು, ದಾಖಲೆ ವಶಪಡಿಸಿಕೊಂಡಿದ್ದಾರೆ.

ಲಕ್ಷ್ಮೀಗೋಲ್ಡ್ ಪ್ಯಾಲೇಸ್‌ನ ಮಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮಳಿಗೆಗಳಲ್ಲೂ ಶೋಧ ನಡೆಸಲಾಗಿದೆ. ಶ್ರೀ ಕೃಷ್ಣಯ್ಯ ಚೆಟ್ಟಿ ಆ್ಯಂಡ್ ಸನ್ಸ್ ಸಂಸ್ಥೆಗೆ ಸೇರಿದ ಐದು ಮಳಿಗೆ ಹಾಗೂ ವಿಜಯ ಜೆಮ್ಸ್ ಅಂಡ್ ಜುವೆಲರ್ಸ್ ಮತ್ತು ಶ್ರೀ ಕೃಷ್ಣ ಡೈಮಂಡ್ಸ್‌ಗೆ ಸೇರಿದ ತಲಾ ಮೂರು ಸ್ಥಳಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂದು ಐ.ಟಿ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry