ವಿಜಯ ಮಲ್ಯ ಘೋಷಿತ ಅಪರಾಧಿ

7

ವಿಜಯ ಮಲ್ಯ ಘೋಷಿತ ಅಪರಾಧಿ

Published:
Updated:
ವಿಜಯ ಮಲ್ಯ ಘೋಷಿತ ಅಪರಾಧಿ

ನವದೆಹಲಿ: ಉದ್ಯಮಿ ವಿಜಯ ಮಲ್ಯ ಅವರನ್ನು ದೆಹಲಿ ನ್ಯಾಯಾಲಯ ಘೋಷಿತ ಅಪರಾಧಿ ಎಂದು ಘೋಷಿಸಿದೆ.

ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ (ಫೆರಾ) ಉಲ್ಲಂಘನೆ ಪ್ರಕರಣದಲ್ಲಿ ಸಮನ್ಸ್‌ನಿಂದ ತಪ್ಪಿಸಿಕೊಳ್ಳುತ್ತಿರುವುದರಿಂದ ನ್ಯಾಯಾಲಯ ಈ ಕ್ರಮಕೈಗೊಂಡಿದೆ.

‘ಹಲವು ಬಾರಿ ಸಮನ್ಸ್‌ ನೀಡಿದ್ದರೂ ಮಲ್ಯ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಅವರ ಪರವಾಗಿಯೂ ಯಾವುದೇ ಮನವಿ ಸಲ್ಲಿಸಿಲ್ಲ. ಹೀಗಾಗಿ, ಮಲ್ಯ ಘೋಷಿತ ಅಪರಾಧಿ ಎಂದು ಘೋಷಿಸಲಾಗುವುದು’ ಎಂದು ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ದೀಪಕ್‌ ಶೇಹ್ರಾವತ್‌ ತಿಳಿಸಿದರು.

ಕಳೆದ ವರ್ಷ ಏಪ್ರಿಲ್‌ 12ರಂದು ಜಾಮೀನು ರಹಿತ ವಾರಂಟ್‌ ಅನ್ನು ವಿಜಯ ಮಲ್ಯ ವಿರುದ್ಧ ಹೊರಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry