ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಧಾರ್‌ ಮಾಹಿತಿ ಸುರಕ್ಷಿತ’

Last Updated 4 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಅನಾಮಧೇಯ ಮಾರಾಟಗಾರರು ಕೇವಲ ₹500ಕ್ಕೆ ಜನರ ಸಂಪೂರ್ಣ ಆಧಾರ್‌ ವಿವರಗಳನ್ನು ವಾಟ್ಸ್‌ಆ್ಯಪ್‌ ಮೂಲಕ ನೀಡುತ್ತಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ತಳ್ಳಿ ಹಾಕಿದೆ.

ಆಧಾರ್‌ ಮಾಹಿತಿ ಸಂಗ್ರಹ ವ್ಯವಸ್ಥೆ ಸುರಕ್ಷಿತವಾಗಿದ್ದು, ಅದರ ಕಾರ್ಯನಿರ್ವಹಣೆಗಳ ಸಂಪೂರ್ಣ ವಿವರಗಳನ್ನು ದಾಖಲಿಸಲಾಗುತ್ತದೆ. ಹೀಗಾಗಿ, ಅದರ ದುರ್ಬಳಕೆಯನ್ನು ಪತ್ತೆ ಹಚ್ಚಲು ಸಾಧ್ಯವಿದೆ ಮತ್ತು ಅಂತಹವರ ವಿರುದ್ಧ ಕೈಗೊಳ್ಳಬಹುದು ಎಂದು ಪ್ರಾಧಿಕಾರ ಹೇಳಿಕೆಯಲ್ಲಿ ತಿಳಿಸಿದೆ.

‘ಜನರ ಕುಂದುಕೊರತೆಗಳ ನಿವಾರಣೆಗಾಗಿ ನಿಯೋಜಿತ ಸಿಬ್ಬಂದಿ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳಿಗೆ ‘ಹುಡುಕಾಟದ ಸೌಲಭ್ಯ’ ನೀಡಲಾಗಿದೆ. ಅದಕ್ಕೂ ಕೂಡ ಅವರು ತಮ್ಮ ಆಧಾರ್‌ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ’ ಎಂದು ಯುಐಡಿಎಐ ಹೇಳಿದೆ.

‘ಮಾಧ್ಯಮಗಳ ವರದಿಯಲ್ಲಿ ಪ್ರಸ್ತಾಪವಾಗಿರುವ ಅಂಶವು ಕುಂದುಕೊರತೆ ನಿವಾರಣೆಯ ಶೋಧ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣದಂತೆ ಕಾಣುತ್ತಿದೆ’ ಎಂದು ಅದು ಹೇಳಿದೆ.

‘ಈ ಸೌಲಭ್ಯವು ಹೆಸರು ಮತ್ತು ಇತರ ಕೆಲವು ಸೀಮಿತ ಮಾಹಿತಿಗಳನ್ನು ಮಾತ್ರ ನೀಡುತ್ತದೆಯೇ ವಿನಾ, ಜನರ ಬಯೊಮೆಟ್ರಿಕ್‌ ವಿವರಗಳನ್ನು ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.

‘ಬಯೊಮೆಟ್ರಿಕ್‌ ಮಾಹಿತಿಗಳನ್ನು ಯಾರೂ ಕದ್ದಿಲ್ಲ. ಅದು ಸುರಕ್ಷಿತವಾಗಿದೆ. ಬಯೊಮೆಟ್ರಿಕ್‌ ವಿವರಗಳಿಲ್ಲದೇ ಹೆಸರು ಮತ್ತು ಪ್ರದೇಶಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ದುರ್ಬಳಕೆ ಮಾಡಲು ಸಾಧ್ಯವಿಲ್ಲ’ ಎಂದು ಅದು ಹೇಳಿದೆ.

‘ಆಧಾರ್‌ ಸಂಖ್ಯೆ ರಹಸ್ಯ ಅಲ್ಲ. ಸರ್ಕಾರದ ಯೋಜನೆಗಳ ಲಾಭ ಪಡೆಯಲು ಆಧಾರ್‌ ಕಾರ್ಡ್‌ದಾರರು ಅಧಿಕೃತ ಸಂಸ್ಥೆಗಳೊಂದಿಗೆ ಸಂಖ್ಯೆಯನ್ನು ಹಂಚಿಕೊಳ್ಳಲೇ ಬೇಕಾಗುತ್ತದೆ. ಆಧಾರ್‌ ಸಂಖ್ಯೆಯ ಮಾಹಿತಿ ಸಿಕ್ಕಿದ ಮಾತ್ರಕ್ಕೆ ಅದರಿಂದ ಭದ್ರತೆಗೆ ಬೆದರಿಕೆ ಇಲ್ಲ ಅಥವಾ ಹಣಕಾಸು ಅಥವಾ ಇತರ ವಂಚನೆಗಳಿಗೆ ಕಾರಣವೂ ಆಗುವುದಿಲ್ಲ’ ಎಂದು ಪ್ರಾಧಿಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT