ನ್ಯಾಯಮೂರ್ತಿಗಳ ಸಂಬಳ ಏರಿಕೆಗೆ ಲೋಕಸಭೆ ಒಪ್ಪಿಗೆ

7

ನ್ಯಾಯಮೂರ್ತಿಗಳ ಸಂಬಳ ಏರಿಕೆಗೆ ಲೋಕಸಭೆ ಒಪ್ಪಿಗೆ

Published:
Updated:
ನ್ಯಾಯಮೂರ್ತಿಗಳ ಸಂಬಳ ಏರಿಕೆಗೆ ಲೋಕಸಭೆ ಒಪ್ಪಿಗೆ

ನವದೆಹಲಿ: ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ವೇತನ ಹೆಚ್ಚಳ ಮಸೂದೆಗೆ ಲೋಕಸಭೆ ಒಪ್ಪಿಗೆ ನೀಡಿದೆ.

ಇದರಿಂದಾಗಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯ ವೇತನ ತಿಂಗಳಿಗೆ ₹1 ಲಕ್ಷದಿಂದ ₹2.8 ಲಕ್ಷಕ್ಕೆ ಏರಿಕೆಯಾಗಲಿದೆ. ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಮತ್ತು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ವೇತನ ₹ 90 ಸಾವಿರದಿಂದ ₹2.5 ಲಕ್ಷಕ್ಕೆ ಮತ್ತು ಹೈಕೋರ್ಟ್‌ ನ್ಯಾಯಮೂರ್ತಿಗಳ ವೇತನ ₹80 ಸಾವಿರದಿಂದ ₹2.25 ಲಕ್ಷಕ್ಕೆ ಏರಲಿದೆ.

ಮಸೂದೆಯ ಮೇಲಿನ ಚರ್ಚೆಗೆ ಉತ್ತರಿಸಿದ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌, ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ಮಸೂದೆಯನ್ನು ಮರಳಿ ತರಲು ಸರ್ಕಾರ ಸಿದ್ಧವಿದೆ. ಆದರೆ ಎಲ್ಲ ಪಕ್ಷಗಳು ಒಮ್ಮತಕ್ಕೆ ಬಂದು ಮಸೂದೆಯನ್ನು ಅಂಗೀಕರಿಸಬೇಕು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry