‘ಒಗ್ಗಟ್ಟಿದ್ದರೆ ರಾಜಕೀಯ ಪ್ರಾತಿನಿಧ್ಯ’

7

‘ಒಗ್ಗಟ್ಟಿದ್ದರೆ ರಾಜಕೀಯ ಪ್ರಾತಿನಿಧ್ಯ’

Published:
Updated:
‘ಒಗ್ಗಟ್ಟಿದ್ದರೆ ರಾಜಕೀಯ ಪ್ರಾತಿನಿಧ್ಯ’

ಬೆಂಗಳೂರು: ‘ಕ್ಷತ್ರಿಯ ಪಂಗಡದವರೆಲ್ಲ ಒಗ್ಗಟ್ಟು ಪ್ರದರ್ಶಿಸಿದರೆ ಮಾತ್ರ ರಾಜಕೀಯ ಪ್ರಾತಿನಿಧ್ಯ ಸಿಗಲಿದೆ’ ಎಂದು ಪಿ.ಜಿ.ಆರ್ ಸಿಂಧ್ಯಾ ಅಭಿಪ್ರಾಯಪಟ್ಟರು.

‘ಕ್ಷತ್ರಿಯರು ವಿವಿಧ ಪಂಗಡಗಳಲ್ಲಿ ಹಂಚಿ ಹೋಗಿದ್ದಾರೆ. ಅವರೆಲ್ಲ ತಮ್ಮದೇ ಆದ  ಪ್ರತ್ಯೇಕ ಸಂಘಟನೆಗಳನ್ನು ಮಾಡಿಕೊಂಡಿದ್ದಾರೆ. ಅಂತಹ ಎಲ್ಲ ಸಂಘಟನೆಗಳು ಒಕ್ಕೂಟ ರಚಿಸಿಕೊಂಡು ಮುನ್ನಡೆದರೆ ಮಾತ್ರ ರಾಜಕೀಯ ಪ್ರಾತಿನಿಧ್ಯ ಸಿಗಬೇಕೆಂಬ ಕೂಗಿಗೆ ಬಲ ಬರಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಲು ಪ್ರಯತ್ನಿಸಿ’ ಎಂದರು.

ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭೆಯ ರಾಷ್ಟ್ರೀಯ ಅಧಿವೇಶನದಲ್ಲಿ ’ಜೀವನ್‌ ಗೌರವ’ ಪ್ರಶಸ್ತಿ ಪುರಸ್ಕೃತರಿಗೆ ಮಲ್ಲೇಶ್ವರಂ ಭಾವಸಾರ ಕ್ಷತ್ರಿಯ ಯುವಕ ಮಂಡಳಿಯು ಏರ್ಪಡಿಸಿದ್ದ  ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಸನ್ಮಾನಿತರು: ಅಶ್ವಥ್ ನಾರಾಯಣ್ ರಾವ್ ಪುಟಾಣೆ, ಡಾ. ಪಿ.ಎಸ್. ಚಂದ್ರಶೇಖರ್ (ಸಮಾಜ ಭೂಷಣ ಪ್ರಶಸ್ತಿ), ನಾಗರಾಜ್ ರಾವ್ ಅಂಚಳ್ಕರ್, ಕೆ.ಎನ್. ವಿಶ್ವನಾಥ್ ರಾವ್ ಕಳೋಸೆ, ಪುಷ್ಪಲತಾ ಸುಲಾಖೆ, ಶೋಭಾವತಿ ಬಾಂಬೊರೆ ಮತ್ತು ಯುವಕ ಮಂಡಳಿ ಅಧ್ಯಕ್ಷ ಯೋಗೇಂದ್ರ ಎಸ್.ಎನ್. ವರ್ಣೆ (ನೆಲದಲ್ಲಿ ಕುಳಿತವರು) ಅವರನ್ನು ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry