ಶಿವಕುಮಾರ್ ಗೆ ಜನರಿಂದಲೇ ಏಟು: ಯೋಗೇಶ್ವರ್

6

ಶಿವಕುಮಾರ್ ಗೆ ಜನರಿಂದಲೇ ಏಟು: ಯೋಗೇಶ್ವರ್

Published:
Updated:

ರಾಮನಗರ: ‘ಚನ್ನಪಟ್ಟಣವನ್ನು ಮದುವೆ ಆಗಿದ್ದೇನೆ ಎನ್ನುವ ಸಚಿವ ಡಿ.ಕೆ.ಶಿವಕುಮಾರ್ ಇಲ್ಲಿನ ಯಾವ ಹೆಣ್ಣನ್ನು ಮದುವೆ ಆಗಿದ್ದಾರೆ ಎಂಬುವುದನ್ನು ಸ್ಪಷ್ಟಪಡಿಸಬೇಕು. ಇಲ್ಲವಾದಲ್ಲಿ ಇಲ್ಲಿನ ಹೆಂಗಸರಿಂದ ಅವರ ಕೊರಳ ಪಟ್ಟಿ ಹಿಡಿಸಿ ಪೊರಕೆಯಲ್ಲಿ ಹೊಡೆಸುತ್ತೇವೆ’ ಎಂದು ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಕಿಡಿಕಾರಿದರು.

ಇಲ್ಲಿನವರನ್ನು ಮದುವೆ ಆಗಿದ್ದೇನೆ ಎಂದು ಪದೇ ಪದೇ ಹೇಳುವ ಮೂಲಕ ನಮ್ಮ ತಾಲ್ಲೂಕಿನ ಮಹಿಳೆಯರ ಸ್ವಾಭಿಮಾನವನ್ನು ಅವರು ಕೆರಳಿಸಿದ್ದಾರೆ. ಯಾವ ಮಹಿಳೆಯನ್ನು ಮದುವೆ ಆಗಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು. ಅವರನ್ನೇ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಬೇಕು ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು.

ಸಂಸದರಿಂದ ಅಕ್ರಮ ಗಣಿಗಾರಿಕೆ: ಸಂಸದ ಡಿ.ಕೆ. ಸುರೇಶ್ ಚನ್ನಪಟ್ಟಣದಲ್ಲಿ ಎರಡು ಕ್ವಾರಿಗಳನ್ನು ಹೊಂದಿದ್ದು, ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಇದಲ್ಲದೆ ಬಿಡದಿಯ ಕೆಂಪನಹಳ್ಳಿ ಬಳಿ ಎಂ ಸ್ಯಾಂಡ್ ದಂಧೆ ನಡೆಸುತ್ತಿದ್ದಾರೆ ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry