ಶನಿವಾರ, ಜೂಲೈ 11, 2020
28 °C

ಬೇರೆಯವರ ಜಮೀನಿಗೆ ಸಾಲ ಪಡೆದ ಭೂಪ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಧುಗಿರಿ:  ಜಮೀನಿನ ಮಾಲೀಕ ತಾಲ್ಲೂಕಿನ ನೇರಳೆಕೆರೆ ಗ್ರಾಮದ ಸಾಬ್‌ಜಾನ್ ಅವರ ಪುತ್ರ ಫಕ್ರುದ್ದೀನ್ ಅವರು ಕೃಷಿ ಭೂಮಿ ಮೇಲೆ ಸಾಲ ಪಡೆಯಲು ಎಸ್‌ಬಿಐ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ ಬ್ಯಾಂಕ್‌ನವರು ನಿಮ್ಮ ಹೆಸರಿನಲ್ಲಿ ಈಗಾಗಲೇ ಸಾಲ ಕೊಡಲಾಗಿದೆ ಎಂದು ದಾಖಲೆ ನೀಡಿದ್ದಾರೆ. ಇದನ್ನು ನೋಡಿದ ಫಕ್ರುದ್ದೀನ್ ಕಂಗಾಲಾಗಿದ್ದಾರೆ.

ಗ್ರಾಮದಲ್ಲಿ ಫಕೃದ್ದೀನ್‌ ಹೆಸರಿನ ಮತ್ತೊಬ್ಬ ಇದ್ದಾನೆ. ಈತನು  ಸರ್ವೆ ನಂಬರ್ 46/ಪಿ 14ರ 3 ಎಕರೆ 20 ಗುಂಟೆ ಜಮೀನಿನ ಖಾತೆ ಪಹಣಿ ಪಡೆದಿದ್ದಾನೆ. ತನ್ನ ಆಧಾರ್‌ ಕಾರ್ಡ್‌ ನೀಡಿ ತಾನೇ ಫಕ್ರುದ್ಧೀನ್‌ ಎಂದು ಹೇಳಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದಾನೆ.

ಪಹಣಿಯಲ್ಲಿ ಭೂ ಮಾಲೀಕರ ಭಾವ ಚಿತ್ರ ಇರುವುದಿಲ್ಲ. ಹೀಗಾಗಿ ಬ್ಯಾಂಕ್‌ನವರಿಗೆ ಈತ ನಕಲಿ ಫಕ್ರುದ್ದೀನ್ ಎಂದು ತಿಳಿಯಲು ಸಾಧ್ಯವಾಗಿಲ್ಲ. ಗ್ರಾಮ ಪಂಚಾಯಿತಿಯಿಂದ ಪಡೆದಿರುವ ವಾಸಸ್ಥಳ ದೃಢೀಕರಣ ಪತ್ರದಲ್ಲಿ ನಕಲಿ ಫಕೃದ್ದೀನ್‌ ತನ್ನ ತಂದೆ ಸಾಬ್‌ಜಾನ್ ಸಾಬ್ ಎಂದೇ ಬರೆಸಿದ್ದಾನೆ. ಇದು ಈ ಯಡವಟ್ಟಿಗೆ ಕಾರಣವಾಗಿದೆ. ಈ ಬಗ್ಗೆ ಬ್ಯಾಂಕ್‌ನವರು ಮಿಡಿಗೇಶಿ ಠಾಣೆಗೆ ದೂರು ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.