ಶನಿವಾರ, ಜೂಲೈ 4, 2020
21 °C

ನೀರು ಬಿಟ್ಟು ದಡಕ್ಕೆ ಏರಿದ ಬಾರ್ಜ್; ಜನ ಸಂಚಾರ ಅಸ್ತವ್ಯಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರು ಬಿಟ್ಟು ದಡಕ್ಕೆ ಏರಿದ ಬಾರ್ಜ್; ಜನ ಸಂಚಾರ ಅಸ್ತವ್ಯಸ್ತ

ಅಂಕೋಲಾ: ಇಲ್ಲಿನ ಮಂಜಗುಣಿ ದಕ್ಕೆಯಲ್ಲಿ ನಿಲ್ಲಿಸಿಡಲಾಗಿದ್ದ ಬಾರ್ಜ್‌ ನೀರಿನ ಉಬ್ಬರಕ್ಕೆ ಮೇಲ್ಮುಖವಾಗಿ ಚಲಿಸಿ ಬಧವಾರ ದಕ್ಕೆಯ ಮೇಲೇರಿದ್ದು, ನೀರಿನ ಇಳಿತದ ಸಂದರ್ಭದಲ್ಲಿಯೂ ಅದು ಕೆಳಗಿಳಿದು ಚಲಿಸಲು ಸಾಧ್ಯವಾಗದೇ ಗುರುವಾರ ಮಧ್ಯಾಹ್ನದವರೆಗೆ ಸಂಚಾರಕ್ಕೆ ತೊಡಕುಂಟಾಯಿತು.

ಬೆಳಿಗ್ಗೆ 6ರಿಂದ ಬಾರ್ಜ್‌ ಅನ್ನು ಬಿಡಲಾಗುತ್ತಿತ್ತು. ಆದರೆ ಅದರ ಸಂಚಾರ ಸ್ಥಗಿತಗೊಂಡಿದ್ದರಿಂದ ಪಟ್ಟಣಕ್ಕೆ ಆಗಮಿಸಲು ಬರುವ ಶಾಲಾ– ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರ ವಹಿವಾಟಿಗೆ ಆಗಮಿಸುವವರು ಪರಿತಪಿಸುವಂತಾಯಿತು. ಆದರೆ ಕೆಲವರು ಚಿಕ್ಕ ದೋಣಿಗಳಲ್ಲಿಯೇ ಸಂಚರಿಸಿದರು. ಗುರುವಾರ ಮಧ್ಯಾಹ್ನ ನೀರಿನ ಉಬ್ಬರದ ವೇಳೆ ಅದನ್ನು ಯಥಾಸ್ಥಿತಿಗೆ ತರಲು ಸಿಬ್ಬಂದಿ ಪ್ರಯತ್ನಿಸಿ ಯಶಸ್ವಿಯಾದ ಬಳಿಕ ಬಾರ್ಜ್‌ ಮತ್ತೆ ಸಂಚಾರ ಆರಂಭಿಸಿತು.

‘ಬಂದರು ಇಲಾಖೆಯವರ ಅವೈಜ್ಞಾನಿಕ ಕಾಮಗಾರಿ ಮತ್ತು ಸಿಬ್ಬಂದಿ ನಿರ್ಲಕ್ಷ್ಯವೇ ಪದೇ ಪದೇ ಇಂಥ ಘಟನೆ ಮರುಕಳಿಸಲು ಕಾರಣವಾಗಿದೆ. ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಚಿಕ್ಕ ಡಿಂಗಿಯೇ ಇದ್ದರೆ ಇಂತಹ ಪರದಾಟ ಇರುತ್ತಿರಲಿಲ್ಲ. ಇಲಾಖೆಯವರು ಇನ್ನಾದರೂ ಸೂಕ್ತ ಕ್ರಮ ಕೈಗೊಳ್ಳಬೇಕು.

ಜನರಿಗೆ ಮತ್ತೆ ತೊಂದರೆ ಉಂಟಾದಲ್ಲಿ ಅಥವಾ ಯಾವುದಾದರು ಪ್ರಾಣಹಾನಿ ಸಂಭವಿಸಿದಲ್ಲಿ ಇಲಾಖೆಯೇ ಜವಾಬ್ದಾರಿ ಹೊರಬೇಕಾಗುತ್ತದೆ’ ಎಂದು ಮಂಜಗುಣಿಯ ನಿವಾಸಿ ಶ್ರೀಪಾದ ನಾಯ್ಕ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.