‘ಅರಭಾವಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ ಬೆಂಬಲ’

7

‘ಅರಭಾವಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ ಬೆಂಬಲ’

Published:
Updated:

ಮೂಡಲಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅರಭಾವಿ ವಿಧಾನಸಭೆ ಮತಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಚಿಂತನೆ ಮಾಡಿದ್ದು, ಅದು ನಿಜವಾದರೆ ತಾವು ಅವರನ್ನು ಬೆಂಬಲಿಸಿ ಅವರ ಪರವಾಗಿ ಕಾರ್ಯ ನಿರ್ವಹಿಸುವುದಾಗಿ ಜೆಡಿಯು ರಾಜ್ಯ ಘಟಕದ ಉಪಾಧ್ಯಕ್ಷ ಅರವಿಂದ ದಳವಾಯಿ ಪ್ರಕಟಿಸಿದ್ದಾರೆ.

ಅರಭಾವಿಯ ಸರ್ವಾಂಗೀಣ ಅಭಿವೃದ್ಧಿಗಾಗಿ ಮತ್ತು ಕ್ಷೇತ್ರದ ರಾಜಕೀಯ ಪರಿವರ್ತನೆಗಾಗಿ ಸಿದ್ದರಾಮಯ್ಯ ಅವರಂತಹ ಮೇರು ವ್ಯಕ್ತಿತ್ವದ ನಾಯಕರ ಅವಶ್ಯಕತೆ ಇದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಾರಂಭಿಕ ರಾಜಕೀಯ ಬೆಳವಣಿಗೆಗೆ ಸಿದ್ದರಾಮಯ್ಯನವರ ಪಾತ್ರವು ಮುಖ್ಯವಾಗಿದ್ದು, ಬರುವ ಚುನಾವಣೆಯಲ್ಲಿ ಬಾಲಚಂದ್ರ ಅವರು ಸಿದ್ದರಾಮಯ್ಯನವರ ಉಪಕಾರ ತೀರಿಸಲು ಅವರಿಗೆ ಅರಭಾವಿ ಕ್ಷೇತ್ರವನ್ನು ಬಿಟ್ಟುಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry