ಬುಧವಾರ, ಆಗಸ್ಟ್ 5, 2020
27 °C

ಭುವನೇಶ್ವರ್‌ ಮಿಂಚಿನ ಬೌಲಿಂಗ್‌: ಆರಂಭಿಕ ಆಘಾತಕ್ಕೊಳಗಾದ ಆತಿಥೇಯ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ್‌ ಮಿಂಚಿನ ಬೌಲಿಂಗ್‌: ಆರಂಭಿಕ ಆಘಾತಕ್ಕೊಳಗಾದ ಆತಿಥೇಯ ತಂಡ

ಕೇಪ್‌ಟೌನ್‌: ಭಾರತ ಎದುರಿನ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಆತಿಥೇಯ ದಕ್ಷಿಣ ಆಫ್ರಿಕಾ ಬ್ಯಾಟಿಂಗ್‌ ಆರಂಭಿಸಿದೆ.

ತವರು ಅಂಗಳಗಳಲ್ಲಿ ಸತತ ಸರಣಿಗಳ ಗೆಲುವು ಕಂಡಿರುವ ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡ ಹೊಸವರ್ಷದ ಆರಂಭದಲ್ಲಿ ವಿದೇಶಿ ನೆಲದಲ್ಲಿ ಜಯದ ಸವಿ ಸವಿಯವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿದೆ.

ಬ್ಯಾಟಿಂಗ್‌ ಆರಂಭಿಸಿದ ಆಫ್ರಿಕಾ ತಂಡದ ಅಗ್ರಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳು ಕೇವಲ 12ರನ್‌ ಆಗುವುದರೊಳಗೆ ಪೆವಿಲಿಯನ್‌ ಸೇರಿಕೊಂಡಿರು. ಇದರಿಂದ ಆತಿಥೇಯ ತಂಡ ಆರಂಭಿಕ ಆಘಾತಕ್ಕೊಳಗಾಗಿದೆ.

ಆರಂಭಿಕರಾದ ಡೀನ್‌ ಎಲ್ಗರ್‌ ಹಾಗೂ ಏಡನ್‌ ಮಾರ್ಕರಾಮ್‌ ಕ್ರಮವಾಗಿ 0, 5ರನ್‌ಗಳಿಸಿದರೆ ಅನುಭವಿ ಹಾಶೀಂ ಆಮ್ಲಾ ಆಟ 3ರನ್‌ ಗಳಿಗೆ ಅಂತ್ಯವಾಯಿತು. ಈ ಮೂವರಿಗೂ ಮಧ್ಯಮ ವೇಗಿ ಭುವನೇಶ್ವರ್‌ ಕುಮಾರ್‌ ಪೆವಿಲಿಯನ್‌ ಹಾದಿ ತೋರಿದರು.

ಸದ್ಯ ಫಾಫ್‌ ಡು ಪ್ಲೆಸಿ ಬಳಗ 7 ಓವರ್‌ಗಳ ಮುಕ್ತಾಯಕ್ಕೆ 15ರನ್‌ಗಳಿಸಿ ಆಡುತ್ತಿದೆ. ಹಿರಿಯ ಆಟಗಾರ ಎಬಿ ಡಿವಿಲಿಯರ್ಸ್‌ ಜತೆ ನಾಯಕ ಪ್ಲೆಸಿ ಕ್ರೀಸ್‌ನಲ್ಲಿದ್ದಾರೆ.

ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಅವರ ಗೌರವಾರ್ಥ ನಡೆಯುತ್ತಿರುವ ‘ಫ್ರೀಡಂ ಸರಣಿ’ ಇದಾಗಿದ್ದು, ಒಟ್ಟು ಮೂರು ಟೆಸ್ಟ್, ಆರು ಏಕದಿನ ಮತ್ತು ಮೂರು ಟ್ವೆಂಟಿ–20 ಪಂದ್ಯಗಳು ನಡೆಯಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.