ಸ್ಮೃತಿ ಮಂದಾನ ಶತಕದ ನೆರವಿನಿಂದ ಪಂದ್ಯ ಗೆದ್ದ ಇಂಡಿಯಾ ಬ್ಲೂ

7

ಸ್ಮೃತಿ ಮಂದಾನ ಶತಕದ ನೆರವಿನಿಂದ ಪಂದ್ಯ ಗೆದ್ದ ಇಂಡಿಯಾ ಬ್ಲೂ

Published:
Updated:
ಸ್ಮೃತಿ ಮಂದಾನ ಶತಕದ ನೆರವಿನಿಂದ ಪಂದ್ಯ ಗೆದ್ದ ಇಂಡಿಯಾ ಬ್ಲೂ

ಇಂದೋರ್: ಸ್ಮೃತಿ ಮಂದಾನ ಶತಕದ ನೆರವಿನಿಂದ ಮಹಿಳೆಯರ ಚಾಲೆಂಜರ್ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಇಂಡಿಯಾ ಬ್ಲೂ ತಂಡ ಭರ್ಜರಿ ಗೆಲುವು ಸಾಧಿಸಿದೆ. ಗುರುವಾರ ನಡೆದ ಪಂದ್ಯದಲ್ಲಿ ಇಂಡಿಯಾ ಬ್ಲೂ ತಂಡವು ಇಂಡಿಯಾ ರೆಡ್ ತಂಡವನ್ನು 8 ವಿಕೆಟ್‍ಗಳಿಂದ  ಪರಾಭವಗೊಳಿಸಿದೆ.

ಇಂಡಿಯಾ ರೆಡ್ ತಂಡ ಸ್ಮೃತಿ ಮಂದಾನ ಅವರ ನೇತೃತ್ವದ ಇಂಡಿಯಾ ಬ್ಲೂ ತಂಡಕ್ಕೆ 199 ರನ್‍ಗಳ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನು ಬೆನ್ನಟ್ಟಿದ್ದ ಇಂಡಿಯಾ ಬ್ಲೂ 29 ಎಸೆತಗಳು ಬಾಕಿ ಇರುವಾಗಲೇ ಗುರಿ ಮುಟ್ಟಿ ಗೆಲುವಿನ ನಗೆ ಬೀರಿತು.

10 ಬೌಂಡರಿ, 1 ಸಿಕ್ಸರ್ ಬಾರಿಸಿ ಮಂದಾನ ಔಟಾಗದೆ 100 ರನ್ ಸಿಡಿಸಿದ್ದಾರೆ. ಇಂಡಿಯಾ ಬ್ಲೂ ತಂಡದ ಆರಂಭಿಕ ಆಟಗಾರ್ತಿಯಾದ ವಿ ಆರ್ ವನಿತಾ  ನಾಲ್ಕು ಬೌಂಡರಿ, 3 ಸಿಕ್ಸರ್ ಸಿಡಿಸಿ 42 ರನ್ ಗಳಿಸಿದರು.ಮೋನಾ ಮೇಶ್ರಮ್ ಔಟಾಗದೆ 44 ರನ್ ಗಳಿಸಿದ್ದಾರೆ.

ಮೊದಲು ಬ್ಯಾಟಿಂಗ್‍ ಮಾಡಿದ ಇಂಡಿಯಾ ರೆಡ್ ತಂಡದ ಪರವಾಗಿ ನಾಯಕಿ ಮಿಥಾಲಿ ರಾಜ್ 72 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದ್ದರು, ಇಂಡಿಯಾ ರೆಡ್ ತಂಡದಲ್ಲಿ ದೀಪ್ತಿ ಶರ್ಮಾ (29) ಸುಶ್ಮಾ ವರ್ಮಾ (30) ಗಳಿಸಿದ್ದು ರಾಜೇಶ್ವರಿ ಗಾಯಕ್‍ವಾಡ್  ಮತ್ತು ರಾಧಾ ತಲಾ 2 ವಿಕೆಟ್ ಗಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry