ಫೆ.1ರಂದು ಕೇಂದ್ರ ಬಜೆಟ್

7

ಫೆ.1ರಂದು ಕೇಂದ್ರ ಬಜೆಟ್

Published:
Updated:
ಫೆ.1ರಂದು ಕೇಂದ್ರ ಬಜೆಟ್

ನವದೆಹಲಿ: ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಅಧಿವೇಶನ ಜನವರಿ 29ರಂದು ಆರಂಭವಾಗಲಿದ್ದು, ಫೆಬ್ರುವರಿ 1ರಂದು ವಿತ್ತ ಸಚಿವರು 2018-19ರ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಅಧಿವೇಶನವು ಏಪ್ರಿಲ್ 6ರ ವರೆಗೆ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ತಿಳಿಸಿದ್ದಾರೆ.

ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜನವರಿ 29ರಂದು ಭಾಷಣ ಮಾಡಲಿದ್ದಾರೆ, ಅದೇ ದಿನ ವಿತ್ತೀಯ ಸಮೀಕ್ಷೆ ಕೂಡಾ ಮಂಡನೆಯಾಗಲಿದೆ.

ಎರಡು ಹಂತಗಳಲ್ಲಿ ಅಧಿವೇಶನ ನಡೆಯಲಿದ್ದು ಫೆಬ್ರುವರಿ 9 ರ ವರೆಗೆ ಮೊದಲ ಹಂತ ಮತ್ತು ಮಾರ್ಚ್ 5ಮತ್ತು 6ರಂದು ಎರಡನೇ ಹಂತದ ಅಧಿವೇಶನ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry