ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆ: ಪ್ರಾಣಿ ಬಲಿಯ ಪಂಕ್ತಿ ಸೇವೆ ಪಾಲಿಸಿದ ಭಕ್ತರು!

7

ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆ: ಪ್ರಾಣಿ ಬಲಿಯ ಪಂಕ್ತಿ ಸೇವೆ ಪಾಲಿಸಿದ ಭಕ್ತರು!

Published:
Updated:
ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆ: ಪ್ರಾಣಿ ಬಲಿಯ ಪಂಕ್ತಿ ಸೇವೆ ಪಾಲಿಸಿದ ಭಕ್ತರು!

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಯಲ್ಲಿ ಶುಕ್ರವಾರ ಪ್ರಾಣಿ ಬಲಿಯ ಪಂಕ್ತಿ ಸೇವೆ ಪಂಕ್ತಿಸೇವೆ ನಡೆಯಿತು.

ಪಂಕ್ತಿ ಸೇವೆ ಹೆಸರಿನಲ್ಲಿ ಪ್ರಾಣಿ ಬಲಿ ನಡೆಸುವುದನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಆದರೆ, ಅದನ್ನು ಲೆಕ್ಕಿಸದೆ ಸಾವಿರಾರು ಭಕ್ತರು ತಮ್ಮ ಸಂಪ್ರದಾಯವನ್ನು ಪಾಲಿಸಿದರು.

ಜಾತ್ರೆ ಆವರಣದಲ್ಲಿ ಪ್ರಾಣಿ ಬಲಿ ನೀಡಲು ಅವಕಾಶ ಇಲ್ಲದ ಕಾರಣ ಕೆಲವರು ಜಾತ್ರೆಗೆ ಬರುವ ಮುನ್ನವೇ ಕುರಿ ಕೋಳಿಗಳನ್ನು ಕತ್ತರಿಸಿಕೊಂಡು ತಂದಿದ್ದರೆ, ಅನೇಕರು ಪೊಲೀಸರ ಕಣ್ತಪ್ಪಿಸಿ ಬೇರೆ ಮಾರ್ಗಗಳ ಮೂಲಕ ಪ್ರಾಣಿಗಳನ್ನು ತಂದು ಹೊರವಲಯದಲ್ಲಿನ ಬಿಡಾರಗಳಲ್ಲಿ ಪ್ರಾಣಿಗಳನ್ನು ಕತ್ತರಿಸಿ ಎಡೆ ಸಿದ್ಧಪಡಿಸಿದರು.

ಪ್ರಮುಖ ರಸ್ತೆಗಳಲ್ಲಿನ ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ವೇಳೆ ದೊರಕಿದ ಪ್ರಾಣಿಗಳನ್ನು ಪೊಲೀಸರು ವಶಪಡಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry