‘ಅಲೆಮಾರಿ’ಗಳ ಜೀವನೋಪಾಯಕ್ಕೆ ₹25 ಕೋಟಿ ವೆಚ್ಚದಲ್ಲಿ ಹೊಸ ಯೋಜನೆ

7

‘ಅಲೆಮಾರಿ’ಗಳ ಜೀವನೋಪಾಯಕ್ಕೆ ₹25 ಕೋಟಿ ವೆಚ್ಚದಲ್ಲಿ ಹೊಸ ಯೋಜನೆ

Published:
Updated:
‘ಅಲೆಮಾರಿ’ಗಳ ಜೀವನೋಪಾಯಕ್ಕೆ ₹25 ಕೋಟಿ ವೆಚ್ಚದಲ್ಲಿ ಹೊಸ ಯೋಜನೆ

ಬೆಂಗಳೂರು: ಅಲೆಮಾರಿ ಸಮುದಾಯದವರ ಜೀವನೋಪಾಯಕ್ಕೆ ನೆರವು ಕಲ್ಪಿಸಲು ₹25 ಕೋಟಿ ವೆಚ್ಚದಲ್ಲಿ ಹೊಸ ಯೋಜನೆಯೊಂದನ್ನು ಸರ್ಕಾರ ಜಾರಿಗೆ ತರಲಿದೆ.

ಪರಿಶಿಷ್ಟ ಜಾತಿಗೆ ಸೇರಿದ್ದರೂ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿರುವ ದಕ್ಕಲಿಗ, ಸುಡುಗಾಡು ಸಿದ್ಧ, ಬುಡ್ಗ ಜಂಗಮ, ಶಿಳ್ಳೇಕ್ಯಾತ ಸೇರಿದಂತೆ 40 ಉಪ ಜಾತಿಗಳ ಜನರಿಗೆ ವಿಶೇಷ ನೆರವು ನೀಡುವ ಯೋಜನೆ ರೂಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಮಾಧ್ಯಮ ಪ್ರತಿನಿಧಿಗಳಿಗೆ ಶುಕ್ರವಾರ ತಿಳಿಸಿದರು.

ಸ್ವ ಉದ್ಯೋಗಕ್ಕಾಗಿ ಕಾರು ಖರೀದಿ, ವ್ಯಾಪಾರ, ಉದ್ದಿಮೆ ಆರಂಭಿಸಲು ₹10 ಲಕ್ಷದವರೆಗೆ ನೇರ ಸಾಲ, ಕೃಷಿ ಮಾಡಲು ಮುಂದಾದರೆ ಗರಿಷ್ಠ ₹ 15 ಲಕ್ಷ ವೆಚ್ಚದಲ್ಲಿ ಎರಡು ಎಕರೆ ಜಮೀನು ಖರೀದಿಗೆ ನೆರವು ನೀಡಲಾಗುವುದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry