ಚಾಕ್ಲೇಟ್ ಕಂದು ಬಣ್ಣದಲ್ಲಿರಲಿದೆ ₹10 ಹೊಸ ನೋಟು!

7

ಚಾಕ್ಲೇಟ್ ಕಂದು ಬಣ್ಣದಲ್ಲಿರಲಿದೆ ₹10 ಹೊಸ ನೋಟು!

Published:
Updated:
ಚಾಕ್ಲೇಟ್ ಕಂದು ಬಣ್ಣದಲ್ಲಿರಲಿದೆ ₹10 ಹೊಸ ನೋಟು!

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ ₹10ರ ಮುಖಬೆಲೆಯ ಹೊಸ ನೋಟನ್ನು ಚಲಾವಣೆಗೆ ತರಲಿದೆ. ಮಹಾತ್ಮ ಗಾಂಧಿ ಸರಣಿಯಲ್ಲಿ ಬಿಡುಗಡೆಯಾಗುತ್ತಿರುವ ಈ ಹೊಸ ನೋಟು ಚಾಕ್ಲೇಟ್ ಕಂದು ಬಣ್ಣದಲ್ಲಿರಲಿದೆ ಎಂದು ಎಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹೊಸ ನೋಟು ಬಂದರೂ ₹10ರ ಹಳೆ ನೋಟುಗಳು ಚಲಾವಣೆಯಲ್ಲಿರಲಿವೆ.

ಮಾರ್ಚ್ ತಿಂಗಳ ಆರಂಭದಲ್ಲಿ ಹೆಚ್ಚಿನ ಸುರಕ್ಷಾ ವೈಶಿಷ್ಟ್ಯ ಹೊಂದಿದ ₹10ರ ಹೊಸ ನೋಟುಗಳನ್ನು ಚಲಾವಣೆಗೆ ತರಲು ಸರ್ಕಾರ ಚಿಂತಿಸುತ್ತಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿತ್ತು. ₹10ರ ಹೊಸ ನೋಟಿನಲ್ಲಿ ನಂಬರ್ ಫಲಕದಲ್ಲಿ  ‘L’ ಅಕ್ಷರ ಇರಲಿದ್ದು, ಆರ್‍‌ಬಿಐ ಗವರ್ನರ್ ಊರ್ಜಿತ್  ಪಟೇಲ್ ಅವರ ಸಹಿ ಇದೆ. ನೋಟು ಮುದ್ರಣವಾದ ವರ್ಷ ಹಿಮ್ಮುಖವಾಗಿರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry