ಇದು ಸ್ನೇಹದ ವಿಷಯ

7

ಇದು ಸ್ನೇಹದ ವಿಷಯ

Published:
Updated:
ಇದು ಸ್ನೇಹದ ವಿಷಯ

ಸ್ನೇಹ...

ಆ ಪದವೇ ಹಾಗೆ. ಮನಸಿಗೆ ಒಂದು ಅನುಭೂತಿಯನ್ನು ಸೃಷ್ಟಿಸುತ್ತದೆ. ನಾನು, ನನ್ನದು, ನನ್ನವರು ಎಂಬ ಸ್ವಾರ್ಥಲೋಕದಿಂದ ಹೊರಗುಳಿದಿರುವ ಒಂದೇ ಒಂದು ಸುಂದರ ಸಂಬಂಧವೆಂದರೆ ಅದು ಸ್ನೇಹ. ಜಾತಿ–ಧರ್ಮ, ಹೆಣ್ಣು–ಗಂಡಿನ ಭೇದವಿಲ್ಲದ ಸ್ನೇಹದಲ್ಲಿ ನಂಬಿಕೆಯೇ ಜೀವಾಳ. ಸ್ನೇಹಕ್ಕೆ ಹುಟ್ಟಿದೆ, ಆದರೆ ಸಾವಿಲ್ಲ, ಇದರ ಸರಪಳಿ ಕಡಿಯದಂತೆ ನೋಡಿಕೊಳ್ಳವುದು ನಮ್ಮ ಕೈಲೇ ಇದೆ.

* ನಿಮ್ಮ ದಿನಚರಿಯಲ್ಲಿ ಸ್ನೇಹಿತರಿಗೂ ಒಂದಿಷ್ಟು ಸಮಯ ಮೀಸಲಿರಲಿ

* ನಿಮ್ಮ ಆಸುಪಾಸಿನಲ್ಲಿದ್ದರೆ ವಾರಕೊಮ್ಮೆಯಾದರೂ ಭೇಟಿಯಾಗಿ

* ಮದುವೆ ಎನ್ನುವುದು ನಿಮ್ಮ ಗೆಳೆತನದ ಬಳಗಕ್ಕೆ ಒಂದು ಹೊಸ ಜೀವದ ಸೇರ್ಪಡೆಯಷ್ಟೇ. ಅದು ನಿಮ್ಮ ಸ್ನೇಹತಂತುಗಳು ಕಡಿದುಹೋಗಲು ಕಾರಣವಾಗುವುದು ಬೇಡ

* ಸ್ನೇಹದ ಹೆಸರಿನಲ್ಲಿ ನಂಬಿಕೆಗೆ ದ್ರೋಹ ಬಗೆಯುವ ಕೆಲಸ ಮಾಡಬೇಡಿ. ಅದು ಮಾನವೀಯತೆಗೇ ಮಾಡುವ ಅವಮಾನ

* ಸ್ನೇಹದಲ್ಲಿ ವ್ಯವಹಾರ ನಡೆಸುವಾಗ ಎಚ್ಚರದಿಂದಿರಿ, ಪ್ರಾಮಾಣಿಕವಾಗಿ ವರ್ತಿಸಿ. ಅನೇಕ ವರ್ಷಗಳ ಸ್ನೇಹ ಕ್ಷುಲ್ಲಕ ಕಾರಣಕ್ಕೆ ಹಾಳಾಗಿದೆ

* ನಿಮ್ಮ ತೀರಾ ವೈಯಕ್ತಿಕ ಗುಟ್ಟನ್ನು ಯಾವ ಸ್ನೇಹಿತರೊಂದಿಗೂ ಬಿಟ್ಟುಕೊಡಬೇಡಿ, ಮುಂದೆ ಯಾವುದೋ ಕಾರಣಕ್ಕೆ ಅವರು ನಿಮ್ಮಿಂದ ದೂರಾದರೆ ಆ ವೈಯಕ್ತಿಕ ವಿಷಯದಿಂದ ನಿಮ್ಮ ಮಾನಹಾನಿ ಮಾಡಬಹುದು

* ನಿಮ್ಮ ಕಷ್ಟಗಳನ್ನು ಹಂಚಿಕೊಳ್ಳಿ. ಆದರೆ ನಿಮ್ಮ ಎಲ್ಲ ಕಷ್ಟಗಳಿಗೆ ಗೆಳೆಯರು ಸ್ಪಂದಿಸಬೇಕು ಎಂಬ ಭಾವನೆ ಇರಿಸಿಕೊಳ್ಳಬೇಡಿ

* ಎಲ್ಲೋ ದೂರದ ದೇಶ ಅಥವಾ ದೂರದ ಊರಿನಲ್ಲಿ ಅವರಿದ್ದರೆ ಕನಿಷ್ಠ ಹದಿನೈದು ದಿನ ಅಥವಾ ತಿಂಗಳಿಗೊಮ್ಮೆ ಕರೆ ಮಾಡಿ ಮಾತನಾಡಿ. ವಾಟ್ಸಾಪ್‌ ಅಥವಾ ಫೇಸ್‌ಬುಕ್‌ನಲ್ಲಿ ಕಳುಹಿಸುವ ಮೆಸೇಜ್‌ಗಿಂತ ಕರೆ ಮಾಡಿದರೆ ಆತ್ಮೀಯಭಾವ ಹೆಚ್ಚುತ್ತದೆ

* ಬೇರೆಯವರ ಮುಂದೆ ಗೆಳೆಯರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ. ಇದರಿಂದ ಅವರು ನಿಮ್ಮ ಮೇಲೆ ಇರಿಸಿದ ನಂಬಿಕೆಯ ಸೌಧ ಕುಸಿಯಬಹುದು

* ನಿಮ್ಮ ಪ್ರಾಣ ಸ್ನೇಹಿತರ ಚಾರಿತ್ರ್ಯದ ಬಗ್ಗೆ ಎಂದಿಗೂ ಕೆಟ್ಟ ಮಾತನ್ನ ಆಡದಿರಿ. ಜಗತ್ತೇ ನನ್ನ ವಿರುದ್ಧ ತಿರುಗಿ ನಿಂತರೂ ನನ್ನ ಗೆಳೆಯ ನನ್ನ ಪರವಾಗಿ ಇರುತ್ತಾನೆ ಎಂದು ಅವರು ನಂಬಿರುತ್ತಾರೆ

* ಹೊಸ ಸ್ನೇಹಿತರು ಬಂದರು ಎಂದ ಮಾತ್ರಕ್ಕೆ ಹಳಬರನ್ನು ಮರೆಯಬೇಡಿ. ನಿಮ್ಮ ಹೊಸ ಸ್ನೇಹಿತರ ಜೊತೆಗಿನ ಪಾರ್ಟಿ, ಪಿಕ್‌ನಿಕ್‌ನಲ್ಲಿ ಹಳೆ ಸ್ನೇಹಿತರಿಗೂ ಜಾಗವಿರಲಿ

* ಸ್ನೇಹಿತರಿರುವುದು ಕೇವಲ ನಿಮ್ಮ ದುಃಖವನ್ನು ಮಾತ್ರ ಹಂಚಿಕೊಳ್ಳಲು ಅಲ್ಲ, ನಿಮ್ಮ ಖುಷಿಯಲ್ಲೂ ಅವರಿಗೊಂದು ಪಾಲು ನೀಡಿ

* ನಮ್ಮದು ಯಾರೂ ಅಳಿಸಲಾಗದ ಸ್ನೇಹ ಎಂದುಕೊಂಡು ಅವರು ಬ್ಯುಸಿ ಇರುವ ಸಮಯದಲ್ಲಿ ಕರೆ ಮಾಡಿ ಎಲ್ಲಿದ್ದೀಯಾ ಎಂದು ಕೇಳುವ ಸೌಜನ್ಯವೂ ಇಲ್ಲದೇ ಪಟಪಟನೇ ನಿಮ್ಮ ಖುಷಿ–ದುಃಖವನ್ನು ಒದರಬೇಡಿ. ಇದರಿಂದ ಮತ್ತೆಂದೂ ಅವರು ನಿಮ್ಮ ಕರೆಯನ್ನು ಸ್ವೀಕರಿಸುವುದಿಲ್ಲ

* ಅವರ ಹುಟ್ಟುಹಬ್ಬದ ದಿನ ಮರೆಯದೆ ವಿಷ್ ಮಾಡಿ. ಅದೇ ಅವರ ಹುಟ್ಟಹಬ್ಬಕ್ಕೆ ನೀಡುವ ಸುಂದರ ಉಡುಗೊರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry