ಸೈಕ್ಲಿಂಗ್‌: ಮೇಘಾ,ದಾನಮ್ಮಗೆ ಪದಕ

7

ಸೈಕ್ಲಿಂಗ್‌: ಮೇಘಾ,ದಾನಮ್ಮಗೆ ಪದಕ

Published:
Updated:
ಸೈಕ್ಲಿಂಗ್‌: ಮೇಘಾ,ದಾನಮ್ಮಗೆ ಪದಕ

ಹುಬ್ಬಳ್ಳಿ: ಕರ್ನಾಟಕದ ಮೇಘಾ ಗೂಗಾಡ ಮತ್ತು ದಾನಮ್ಮ ಚಿಚಖಂಡಿ ಅವರು ನವದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸಬ್‌ ಜೂನಿಯರ್‌, ಜೂನಿಯರ್‌ ಮತ್ತು ಸೀನಿಯರ್‌ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ತಲಾ ಒಂದು ಪದಕ ಜಯಿಸಿದರು.

18 ವರ್ಷದ ಒಳಗಿನವರ ಬಾಲಕಿಯರ 10 ಕಿ.ಮೀ. ವಿಭಾಗದ ಪಾಯಿಂಟ್‌ ರೇಸ್‌ ಸ್ಪರ್ಧೆಯಲ್ಲಿ ಮೇಘಾ ಬೆಳ್ಳಿ ಪದಕ ಪಡೆದರು. ಈ ಚಾಂಪಿಯನ್‌ಷಿಪ್‌ಲ್ಲಿ ಮೇಘಾ ಜಯಿಸಿದ ಮೂರನೇ ಪದಕವಿದು. ಮೊದಲು ಎರಡು ಚಿನ್ನ ಜಯಿಸಿದ್ದರು.

ಇದೇ ವಯೋಮಾನದ ಸ್ಪರ್ಧೆಯಲ್ಲಿ ದಾನಮ್ಮ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಹಿಂದಿನ ಸ್ಪರ್ಧೆಗಳಲ್ಲಿ ದಾನಮ್ಮ ಮೂರು ಚಿನ್ನದ ಪದಕ ಗೆದ್ದುಕೊಂಡಿದ್ದರು. ಇದರಿಂದ ರಾಜ್ಯದ ಸ್ಪರ್ಧಿಗಳು ಒಟ್ಟು ಪದಕಗಳ ಸಂಖ್ಯೆಯನ್ನು 11ಕ್ಕೆ ಹೆಚ್ಚಿಸಿಕೊಂಡರು. ಶನಿವಾರ ಸ್ಪರ್ಧೆಯ ಕೊನೆಯ ದಿನ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry