ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತ– ಪಾಕ್ ಸರಣಿ ಆಸೆ ಬೇಡ’

Last Updated 5 ಜನವರಿ 2018, 19:30 IST
ಅಕ್ಷರ ಗಾತ್ರ

ಕರಾಚಿ: ‘ಸದ್ಯ ಭಾರತದಲ್ಲಿ ಕ್ರಿಕೆಟ್ ಆಡುವ ಆಸೆಯನ್ನು ಕೈಬಿಟ್ಟು ತಂಡವನ್ನು ಬಲಿಷ್ಠಗೊಳಿಸುವತ್ತ ಗಮನ ನೀಡಬೇಕು’ ಎಂದು ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಜಾವೇದ್‌ ಮಿಯಾಂ ದಾದ್ ಸಲಹೆ ನೀಡಿದರು.

ಕಾರ್ಯಕ್ರಮವೊಂದರ ನಂತರ ಮಾತನಾಡಿದ ಅವರು ‘ಉಭಯ ರಾಷ್ಟ್ರಗಳ ನಡುವಿನ ಪಂದ್ಯಕ್ಕಾಗಿ ಬಿಸಿಸಿಐ ಮುಂದೆ ಕೈಯೊಡ್ಡುವ ಪರಿಸ್ಥಿತಿ ನಮಗಿಲ್ಲ’ ಎಂದು ಕಿಡಿಕಾರಿದರು.

‘ಭಾರತಕ್ಕೆ ನಮ್ಮ ಜೊತೆ ಆಡುವ ಮನಸ್ಸೇ ಇಲ್ಲ. ಅವರೊಂದಿಗೆ ಆಡದಿದ್ದರೆ ನಮ್ಮಲ್ಲಿ ಕ್ರಿಕೆಟ್ ಸತ್ತು ಹೋಗುವುದಿಲ್ಲ’ ಎಂದರು.

‘ನಮ್ಮೊಂದಿಗೆ ಭಾರತ ಒಂದು ದಶಕ ದಿಂದ ಕ್ರಿಕೆಟ್ ಆಡುತ್ತಿಲ್ಲ. ಅದರಿಂದ ನಮ್ಮ ಆಟಗಾರರ ಸಾಮರ್ಥ್ಯದ ಮೇಲೆ ಪರಿಣಾಮವೇನಾದರೂ ಆಗಿದೆಯೇ’ ಎಂದು ಪ್ರಶ್ನಿಸಿದ ಮಿಯಾಂದಾದ್‌ ‘ಪಾಕಿಸ್ತಾನ ತಂಡ ಈಗಲೂ ಬಲಿಷ್ಠವಾಗಿದೆ’ ಎಂದು ಹೇಳಿದರು. 2009ರಿಂದ ಇಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ನಡೆಯುತ್ತಿಲ್ಲ. ಆದರೂ ನಮ್ಮ ಗುಣಮಟ್ಟ ಕುಸಿಯಲಿಲ್ಲ’ ಎಂದರು.

ಹಣಕಾಸಿನ ವ್ಯವಹಾರವನ್ನು ಸಮರ್ಪಕವಾಗಿ ನಿಭಾಯಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಸೂಚನೆ ನೀಡಿದ ಅವರು ‘ಮಂಡಳಿ ಆರ್ಥಿಕವಾಗಿ ಸಬಲವಾಗಿದೆ. ಆದರೂ ಹಣಕಾಸಿನ ಲೆಕ್ಕ ನಿರ್ವಹಣೆಯ ಮೇಲೆ ನಿಗಾ ಇರಿಸಬೇಕು. ಆಡಳಿತ ನಿರ್ವಹಣೆಯ ವೆಚ್ಚವನ್ನು ಕಡಿಮೆ ಮಾಡಲು ಶ್ರಮಿಸಬೇಕು’ ಎಂದು ಅವರು ಸೂಚಿಸಿದರು.

2008ರಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಉಂಟಾದ ದ್ವಿಪಕ್ಷೀಯ ರಾಜಕೀಯ ಬೆಳವಣಿಗೆಗಳ ಕಾರಣ 2012ರ ನಂತರ ಭಾರತ ಮತ್ತು ಪಾಕಿಸ್ತಾನ ತಂಡಗಳು ಯಾವುದೇ ಸರಣಿಗಳನ್ನು ಆಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT