ಎಚ್‌1ಬಿ ವೀಸಾ ವಿಸ್ತರಣೆಗೆ ಕಡಿವಾಣ: ಅಮೆರಿಕ ಸಂಸದರ ಆಕ್ಷೇಪ

7

ಎಚ್‌1ಬಿ ವೀಸಾ ವಿಸ್ತರಣೆಗೆ ಕಡಿವಾಣ: ಅಮೆರಿಕ ಸಂಸದರ ಆಕ್ಷೇಪ

Published:
Updated:
ಎಚ್‌1ಬಿ ವೀಸಾ ವಿಸ್ತರಣೆಗೆ ಕಡಿವಾಣ: ಅಮೆರಿಕ ಸಂಸದರ ಆಕ್ಷೇಪ

ವಾಷಿಂಗ್ಟನ್‌: ಭಾರತದ ವೃತ್ತಿಪರರು ಮತ್ತು ತಂತ್ರಜ್ಞರಿಗೆ ಅಮೆರಿಕದಲ್ಲಿ ಉದ್ಯೋಗ ದೊರಕಿಸಿಕೊಡುವ ಎಚ್1ಬಿ ವೀಸಾ ವಿಸ್ತರಣೆಗೆ ಕಡಿವಾಣ ಹಾಕಲು ಮುಂದಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರದ ನಿರ್ಧಾರವನ್ನು ಅಮೆರಿಕದ ಕೆಲ ಸಂಸದರು ತೀವ್ರವಾಗಿ ವಿರೋಧಿಸಿದ್ದಾರೆ.

‘ಅಮೆರಿಕದವರನ್ನೇ ಖರೀದಿಸಿ, ಅಮೆರಿಕದವರನ್ನೇ ನೇಮಿಸಿಕೊಳ್ಳಿ’ ವಾಕ್ಯದ ಅಡಿ ಟ್ರಂಪ್‌ ವೀಸಾ ವಿಸ್ತರಣೆಗೆ ಕಡಿವಾಣ ಹಾಕಲು ನಿರ್ಧರಿಸಿದ್ದಾರೆ. ಈ ನಿರ್ಧಾರದಿಂದಾಗಿ ಅಮೆರಿಕ ಉತ್ತಮ ಪ್ರತಿಭೆಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲದೇ, ಈ ನಿರ್ಧಾರದಿಂದ ಭಾರತದೊಂದಿಗಿನ ಸಂಬಂಧಕ್ಕೆ ಧಕ್ಕೆಯಾಗಲಿದೆ ಎಂದು ಡೆಮಾಕ್ರಟಿಕ್ ಪಕ್ಷದ ಸಂಸದೆ ತುಳಸಿ ಗಬ್ಬರ್ಡ್ ಹೇಳಿದ್ದಾರೆ.

‘ವೀಸಾ ವಿಸ್ತರಣೆ ಮಾಡದಿದ್ದರೆ ಸುಮಾರು 5ರಿಂದ 7.5 ಲಕ್ಷ ಭಾರತೀಯರು ಮರಳಿ ಹೋಗಬೇಕಾಗುತ್ತದೆ. ಇವರಲ್ಲಿ ಅಮೆರಿಕದ ಬಲಿಷ್ಠ ಆರ್ಥಿಕತೆಗೆ ನೆರವಾಗುತ್ತಿರುವ ‌ಸಣ್ಣ ವ್ಯಾಪಾರಿಗಳೂ ಸೇರಿದ್ದಾರೆ. ಇದರಿಂದ ಅಮೆರಿಕದ 21ನೇ ಶತಮಾನದ ಆರ್ಥಿಕತೆಗೆ ತೀವ್ರ ಹೊಡೆತ ಬೀಳಲಿದೆ’ ಎಂದು ಅವರು ಹೇಳಿದ್ದಾರೆ.

‘ಅಮೆರಿಕದ ಹಲವಾರು ಕ್ಷೇತ್ರಗಳ ಬೆನ್ನೆಲುಬು ಆಗಿರುವ ಭಾರತೀಯ ನೌಕರರನ್ನು ವಾಪಸ್‌ ಕಳುಹಿಸಿದರೆ ಅಮೆರಿಕವನ್ನು ಉನ್ನತ ಸ್ಥಾನಕ್ಕೆ ಏರಿಸುವ ‘ಅಮೆರಿಕ ಫಸ್ಟ್‌’ ಕಾರ್ಯಕ್ರಮ ಪಟ್ಟಿ ಏನಾಗಲಿದೆ?’ ಎಂದು ಹಿಂದೂ ಅಮೆರಿಕನ್‌ ಫೌಂಡೇಷನ್‌ ಪ್ರಶ್ನಿಸಿದೆ.

‘ಎಚ್1ಬಿ ವೀಸಾ ವಿಸ್ತರಣೆ ಮಾಡದೇ ಹೋದರೆ, ದೊಡ್ಡ ಏಟು ಬೀಳುವುದು ಅಮೆರಿಕಕ್ಕೆ ಎಂದು ಸಂಸದ ರಾಜಾ ಕೃಷ್ಣಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

‘ಅಮೆರಿಕದಲ್ಲಿ ವೃತ್ತಿಪರ ಕೌಶಲವಿರುವವರ ಕೊರತೆ ಇದೆ. ಅಧ್ಯಕ್ಷರ ಈ ಕ್ರಮದಿಂದ ಅಮೆರಿಕ ಮತ್ತು ಭಾರತ ಎರಡೂ ದೇಶಗಳಿಗೆ ಹಾನಿಯಾಗಲಿದೆ’ ಎಂದು ಸಾಫ್ಟ್‌ವೇರ್‌ ಉದ್ದಿಮೆಯ ಪ್ರಾತಿನಿಧಿಕ ಮಂಡಳಿ ‘ನಾಸ್ಕಾಮ್‌’ ಪ್ರತಿಪಾದಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry