ಬುಧವಾರ, ಆಗಸ್ಟ್ 5, 2020
21 °C

‘ಅಂಬೇಡ್ಕರ್‌ವಾದಿ’ ಪ್ರಧಾನಿ ಮೌನ ಮುರಿಯಲಿ: ಜಿಗ್ನೇಶ್‌ ಮೆವಾನಿ

ಪಿಟಿಐ Updated:

ಅಕ್ಷರ ಗಾತ್ರ : | |

‘ಅಂಬೇಡ್ಕರ್‌ವಾದಿ’ ಪ್ರಧಾನಿ ಮೌನ ಮುರಿಯಲಿ: ಜಿಗ್ನೇಶ್‌ ಮೆವಾನಿ

ನವದೆಹಲಿ: ‘ದೇಶದಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ಪ್ರಧಾನಿ ಮೌನ ಮುರಿಯಲಿ. ಅಂಬೇಡ್ಕರ್‌ವಾದಿ ಎಂದು ಹೇಳಿಕೊಳ್ಳುವ ಪ್ರಧಾನಿ, ಈಗ ಏಕೆ ಮೌನವಾಗಿದ್ದಾರೆ’ ಎಂದು ಗುಜರಾತ್‌ ಶಾಸಕ ಜಿಗ್ನೇಶ್‌ಮೆವಾನಿ ಪ್ರಶ್ನಿಸಿದ್ದಾರೆ.

‘ಜನವರಿ 9ರಂದು ದೆಹಲಿಯಲ್ಲಿ ಆಯೋಜಿಸಿರುವ ಸಾಮಾಜಿಕ ನ್ಯಾಯ ರ‍್ಯಾಲಿಯಲ್ಲಿ ಮನುಸ್ಮೃತಿ ಮತ್ತು ಸಂವಿಧಾನದ ಪ್ರತಿಗಳನ್ನು ಪ್ರಧಾನಿ ಕಚೇರಿಗೆ ಕೊಂಡೊಯ್ಯುವೆ. ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವಿರಿ ಎನ್ನುವ ಪ್ರಶ್ನೆ ಕೇಳುತ್ತೇನೆ’ ಎಂದು ಮೆವಾನಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

‘ಪುಣೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿಲ್ಲ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅನವಶ್ಯಕವಾಗಿ ನನ್ನನ್ನು ಮತ್ತು ಉಮರ್ ಖಾಲಿದ್‌ನನ್ನು ಗುರಿಯಾಗಿಸಿಕೊಂಡಿವೆ. ಮಹಾರಾಷ್ಟ್ರ ಬಂದ್‌ ಅಂಗವಾಗಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ, ಪ್ರಚೋದನಾಕಾರಿ ಭಾಷಣ ಮಾಡಿಲ್ಲ. ನನ್ನ ಭಾಷಣವನ್ನು ವಿಶ್ಲೇಷಿಸಿ, ಅದರಲ್ಲಿ ಪ್ರಚೋದನಕಾರಿ ಅಂಶಗಳು ಇದ್ದವೇ ಎಂಬುದನ್ನು ತಿಳಿಸಲು ಸಂವಿಧಾನ ಪರಿಣತರನ್ನು ಕೇಳಿ’ ಎಂದರು.

‘ಶಾಂತಿಯುತ ರ‍್ಯಾಲಿಗಳನ್ನು ನಡೆಸಲು ದಲಿತರು ಹಕ್ಕು ಹೊಂದಿದ್ದಾರೆಯೇ ಇಲ್ಲವೇ ಎಂಬುದನ್ನೂ ಪ್ರಧಾನಿ ಸ್ಪಷ್ಟಪಡಿಸಲಿ’ ಎಂದು ಮೆವಾನಿ ಆಗ್ರಹಿಸಿದ್ದಾರೆ.

‘ಡಿಸೆಂಬರ್‌ 31ರ ಸಾರ್ವಜನಿಕ ಸಭೆಯ ನಂತರ ನಾನು ಮೈಗ್ರೇನ್‌ನಿಂದ ಬಳಲುತ್ತಿದ್ದೇನೆ. ಮುಂಬೈನಲ್ಲಿ ನಡೆದ ಕಾರ್ಯಕ್ರದಲ್ಲಿ ಅಥವಾ ಯಾವುದೇ ಬಂದ್‌ನಲ್ಲಿ ಭಾಗವಹಿಸಿಲ್ಲ. ಭೀಮಾ– ಕೋರೆಗಾಂವ್‌ಗೂ ಭೇಟಿ ನೀಡಿಲ್ಲ. ಇಷ್ಟೆಲ್ಲ ಆದರೂ ನನ್ನನ್ನು ಗುರಿಯಾಗಿರಿಸಿರುವುದು ಒಂದು ಸಂಚಿನ ಭಾಗ ಎನಿಸುತ್ತಿದೆ’ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.