ಶನಿವಾರ, ಜೂಲೈ 4, 2020
21 °C

₹10 ಹೊಸ ನೋಟು ಬಿಡುಗಡೆ, ಶೀಘ್ರ ಚಲಾವಣೆಗೆ

ಪಿಟಿಐ Updated:

ಅಕ್ಷರ ಗಾತ್ರ : | |

₹ 10 ಹೊಸ ನೋಟು ಬಿಡುಗಡೆ, ಶೀಘ್ರ ಚಲಾವಣೆಗೆ

ನವದೆಹಲಿ: ₹ 10 ಮುಖಬೆಲೆಯ ಹೊಸ ನೋಟನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬಿಡುಗಡೆ ಮಾಡಿದೆ.

‘ಚಾಕ್ಲೆಟ್ ಕಂದು’ ಬಣ್ಣದ, ಮಹಾತ್ಮ ಗಾಂಧಿ ಸರಣಿಯ ಈ ನೋಟುಗಳು ಬ್ಯಾಂಕ್‌ಗಳಲ್ಲಿ ಶೀಘ್ರವೇ ಲಭ್ಯವಾಗಲಿವೆ. ಈಗ ಚಲಾವಣೆಯಲ್ಲಿರುವ ₹ 10ರ ನೋಟುಗಳು ಮುಂದೆಯೂ ಚಲಾವಣೆಯಲ್ಲಿ ಇರಲಿವೆ ಎಂದು ಆರ್‌ಬಿಐ ಹೇಳಿದೆ.

* ದೇವನಾಗರಿ ಲಿಪಿಯಲ್ಲಿ ₹ 10 ಎಂದು ಮುದ್ರಿತವಾಗಿರುತ್ತದೆ

* ನೋಟಿನ ಮಧ್ಯಭಾಗದಲ್ಲಿ ಮಹಾತ್ಮ ಗಾಂಧಿಯ ಚಿತ್ರ

* ಭಾರತ ಮತ್ತು ಆರ್‌ಬಿಐ ಎಂದು ಮುದ್ರಿತವಾಗಿರುವ ಲೋಹದ ಪಟ್ಟಿ

* ಆರ್‌ಬಿಐನ ಚಿನ್ಹೆ ಮತ್ತು ಗವರ್ನರ್ ಘೋಷಣೆ–ಸಹಿ

* ರಾಷ್ಟ್ರ ಲಾಂಛನ

* ಅರ್ಧ ಲಿಪಿಯಲ್ಲಿ 10 ಸಂಖ್ಯೆ

* ಓರೆಯಾಗಿ ನೋಡಿದಾಗ ಮಾತ್ರ ಕಾಣುವ ಮಹಾತ್ಮ ಗಾಂಧಿ ಚಿತ್ರ ಮತ್ತು 10

* ಸಣ್ಣದರಿಂದ ದೊಡ್ಡದಾಗುತ್ತಾ ಹೋಗುವ ನೋಟಿನ ಕ್ರಮಸಂಖ್ಯೆ

* ಎಡಭಾಗದಲ್ಲಿ ನೋಟು ಮುದ್ರಣವಾದ ವರ್ಷದ ಮಾಹಿತಿ

* ಸ್ವಚ್ಛ ಭಾರತ ಚಿನ್ಹೆ ಮತ್ತು ಲಾಂಛನ

* ಭಾಷಾ ಪಟ್ಟಿ

* ಕೋನಾರ್ಕದ ಸೂರ್ಯ ದೇವಾಲಯದ ಚಕ್ರದ ಚಿತ್ರ

* ದೇವನಾಗರಿ ಲಿಪಿಯಲ್ಲಿ ಮುದ್ರಿತವಾಗಿರುವ ₹ 10

* 63 ಮಿಲಿಮೀಟರ್ ಉದ್ದ

* 123 ಮಿಲಿಮೀಟರ್ ಅಗಲ

ಆಧಾರ: ಭಾರತೀಯ ರಿಸರ್ವ್ ಬ್ಯಾಂಕ್‌ನ ಅಧಿಸೂಚನೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.