ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ನೋಂದಣಿ: 12ರವರೆಗೆ ಅವಕಾಶ

Last Updated 8 ಫೆಬ್ರುವರಿ 2018, 9:00 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕರು ಮತದಾರರ ಪಟ್ಟಿಗೆ ತಮ್ಮ ಹೆಸರು ನೋಂದಾಯಿಸಲು ಇದೇ 12 ರವರೆಗೆ ಅವಕಾಶ ಇದೆ.

ಇದಕ್ಕಾಗಿ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ವಿಶೇಷ ಅಭಿಯಾನ ಹಮ್ಮಿಕೊಂಡಿದೆ. ಅಲ್ಲದೆ, ಇದೇ 31 ರೊಳಗೆ ಮತದಾರರ ಪಟ್ಟಿಯ ಬಗ್ಗೆ ಯಾವುದೇ ಆಕ್ಷೇಪಣೆಗಳು ಇದ್ದರೆ ಆಯೋಗಕ್ಕೆ ಸಲ್ಲಿಸಬಹುದು. ಡೇಟಾಬೇಸ್‌ ಅಪ್‌ಡೇಟ್‌ ಮಾಡಲು ಫೆಬ್ರುವರಿ 15 ಕೊನೆಯ ದಿನ. ಮತದಾರರ ಅಂತಿಮ ಪಟ್ಟಿ ಫೆ.20 ರಂದು ಪ್ರಕಟಗೊಳ್ಳಲಿದೆ.

ಹೊಸ ಮತದಾರರು ಯಾರು

* 2018 ರ ಜನವರಿ 1 ಅಥವಾ ಅದಕ್ಕೂ ಮೊದಲೇ 18 ವರ್ಷ ಪೂರ್ಣಗೊಂಡವರು ಮತದಾರರ ಪಟ್ಟಿಗೆ ತಮ್ಮ ಹೆಸರು ನೋಂದಾಯಿಸಬಹುದು.

* ಒಂದು ವೇಳೆ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ ನೋಂದಾಯಿಸಬಹುದು.

ಯಾರನ್ನು ಸಂಪರ್ಕಿಸಬೇಕು

ವಾಸವಿರುವ ಪ್ರದೇಶ ಅಥವಾ ಬಡಾವಣೆಯ ಮತಗಟ್ಟೆ ಹಂತದ ಅಧಿಕಾರಿಗಳು, ತಾಲ್ಲೂಕು ಕಚೇರಿ, ನಗರ ಸಭೆ ವಾರ್ಡ್‌ ಕಚೇರಿ, ಬಿಬಿಎಂಪಿ ಕಂದಾಯ ಅಧಿಕಾರಿಗಳು.

ಅರ್ಜಿ ಸಲ್ಲಿಸುವುದು ಹೇಗೆ?

*ಅರ್ಜಿಯನ್ನು ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಎ) ಮತ್ತು ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್‌ಎ)ಗಳಿಂದ ಪಡೆಯಬಹುದು.

*ಭರ್ತಿ ಮಾಡಿದ ಅರ್ಜಿಗಳನ್ನು ವಯೋಮಿತಿ, ವಿಳಾಸ ಹಾಗೂ ಭಾವಚಿತ್ರವನ್ನು ಅಗತ್ಯ ದಾಖಲಾತಿ (ಆಧಾರ್‌, ಪಡಿತರ ಚೀಟಿ, ಡ್ರೈವಿಂಗ್‌ ಲೈಸೆನ್ಸ್‌ ಇತ್ಯಾದಿ) ಜೊತೆಗೆ ಇಆರ್‌ಓ ಅಥವಾ ಬಿಎಲ್‌ಓ ಅಧಿಕಾರಿಗಳಿಗೆ ನೀಡಬೇಕು.

*ಅರ್ಜಿಗಳನ್ನು ವೆಬ್‌ಸೈಟ್‌: www.eci.nic.in ಅಥವಾ www.ceokarnataka.kar.nic.in ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

* ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. www.nvsp.in ಅಥವಾ www.voterreg.kar.nic.in ಮೂಲಕ ಅರ್ಜಿ ಅಪ್‌ಲೋಡ್‌ ಮಾಡಬಹುದು.

ಯಾವ ಅರ್ಜಿ ನಮೂನೆ ಯಾವುದಕ್ಕೆ

* ಫಾರಂ –6

ಹೊಸದಾಗಿ ನೋಂದಾಯಿಸಲು ಅಥವಾ ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ವಿಳಾಸ ಬದಲಾಯಿಸಲು.

* ಫಾರಂ–6 ಎ

ಭಾರತೀಯ ಪಾಸ್‌ಪೋರ್ಟ್‌ ಹೊಂದಿರುವ ಅನಿವಾಸಿ ಭಾರತೀಯರಿಗಾಗಿ.

* ಫಾರಂ–7

ಮೃತರ ಹೆಸರನ್ನು ತೆಗೆದುಹಾಕಲು ಅಥವಾ ಅನರ್ಹರು ಮತದಾರರ ಪಟ್ಟಿಯಲ್ಲಿದ್ದರೆ ಆಕ್ಷೇಪ ಸಲ್ಲಿಸಲು.

* ಫಾರಂ–8

ಮತದಾರರ ಪಟ್ಟಿಯಲ್ಲಿನ ನಮೂನೆಯಲ್ಲಿ ಬದಲಾವಣೆ ಅಥವಾ ತಿದ್ದುಪಡಿಗಾಗಿ.

*ಫಾರಂ–8 ಎ

ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ವಿಳಾಸ ಬದಲಾವಣೆಗೆ

* ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವೆಬ್‌ಸೈಟ್‌ಗೆ ಭೇಟಿ ನೀಡಿ– www.ceokarnataka.kar.nic.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT