ದೀಪಕ್‌ ತಾಯಿ ಖಾತೆಗೆ ₹17 ಲಕ್ಷ ಜಮೆ!

7

ದೀಪಕ್‌ ತಾಯಿ ಖಾತೆಗೆ ₹17 ಲಕ್ಷ ಜಮೆ!

Published:
Updated:
ದೀಪಕ್‌ ತಾಯಿ ಖಾತೆಗೆ ₹17 ಲಕ್ಷ ಜಮೆ!

ಮಂಗಳೂರು: ‘ಕಾಟಿಪಳ್ಳದ ದೀಪಕ್‌ ರಾವ್‌ ಅವರ ಕುಟುಂಬಕ್ಕೆ ನೆರವು ನೀಡಲು ಅನೇಕ ಜನರು ಮುಂದಾಗಿದ್ದು, ಎರಡು ದಿನದಲ್ಲಿ ದೀಪಕ್‌ ಅವರ ತಾಯಿಯ ಬ್ಯಾಂಕ್‌ ಖಾತೆಗೆ ₹17,43,859 ಜಮೆ ಆಗಿದೆ’

ಹೀಗೊಂದು ಸುದ್ದಿ ಶುಕ್ರವಾರ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ. ಫೇಸ್‌ಬುಕ್‌ ಖಾತೆಯಲ್ಲಿ ಈ ಸುದ್ದಿಯನ್ನು ಪ್ರಕಟಿಸಲಾಗಿದ್ದು, ಇದರ ಜತೆಗೆ ಪಾಸ್‌ಬುಕ್‌ನ ಪ್ರತಿಯೊಂದನ್ನು ಅಟ್ಯಾಚ್‌ ಮಾಡಲಾಗಿದೆ. ಅಲ್ಲದೆ ಈ ಪೋಸ್ಟ್‌ ಅನ್ನು ಸುಮಾರು 350ಕ್ಕೂ ಹೆಚ್ಚು ಜನರು ಶೇರ್‌ ಮಾಡಿದ್ದಾರೆ.

ಕೆಲವು ಜನರು ಭೀಮ್‌ ಯುಪಿಐ ಆ್ಯಪ್‌ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ ಎನ್ನುವ ಮಾಹಿತಿ ಇದರಲ್ಲಿದ್ದು, ಕೆಲವರು ಬ್ಯಾಂಕ್‌ ಖಾತೆಯ ವಿವರವನ್ನು ಕೇಳಿದ್ದಾರೆ.

ಗುರುವಾರ ಸಂಜೆಯಿಂದಲೇ ‘ದೀಪಕ್‌ ಕುಟುಂಬಕ್ಕೆ ನೆರವು ನೀಡಲು ಮುಂದಾಗಿ’ ಎನ್ನುವ ಮನವಿಯೊಂದಿಗೆ ಸಿಂಡಿಕೇಟ್‌ ಬ್ಯಾಂಕ್‌ ಕಾಟಿಪಳ್ಳ ಶಾಖೆಯ ಬ್ಯಾಂಕ್‌ ಖಾತೆಯ ವಿವರವನ್ನು ಫೇಸ್‌ಬುಕ್‌ಗೆ ಹಾಕಲಾಗಿತ್ತು. ‘ಇದೀಗ ಈ ಖಾತೆಯಲ್ಲಿ ಹಣ ಜಮಾ ಆಗಿದ್ದು ನಿಜ. ಆದರೆ ದೀಪಕ್‌ನನ್ನು ಆ ತಾಯಿಗೆ ಮರಳಿಸಲು ಸಾಧ್ಯವಿಲ್ಲ. ಹಾಗಂತ ಹಿಂದೂ ಸಮಾಜ ಅವನ ತಾಯಿಯನ್ನು ಅನಾಥವಾಗಿ ಬಿಡಲ್ಲ. ಸಾಗರೋಪಾದಿಯಲ್ಲಿ ಸಮಾಜದ ಸಹಾಯಹಸ್ತ ಬಂದಿದೆ. ಇದು ಹಿಂದೂ ಸಮಾಜ ಅಂದ್ರೆ...’ ಎನ್ನುವ ಬರಹವನ್ನು ಪೋಸ್ಟ್‌ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry