ಶನಿವಾರ, ಜೂಲೈ 11, 2020
28 °C

ಬಿಇಒ ಕಚೇರಿ ಉದ್ಘಾಟನೆಗೆ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಟ್ಟೀಹಳ್ಳಿ: ಗ್ರಾಮವನ್ನು ನೂತನ ತಾಲ್ಲೂಕು ಎಂದು ಘೋಷಣೆ ಮಾಡಿದ ಬಳಿಕ ಒಂದೊಂದಾಗಿ ತಾಲ್ಲೂಕು ಮಟ್ಟದ ಕಚೇರಿಗಳ ನಾಮಫಲಕಗಳು ಗ್ರಾಮದಲ್ಲಿ ಕಾಣಿಸಿಕೊಳ್ಳುತ್ತಿವೆ. ಗ್ರಾಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೂತನ ಕಚೇರಿಯು ಶುಕ್ರವಾರ ಅಂತಿಮ ಸ್ವರೂಪ ಪಡೆದು ಉದ್ಘಾಟನೆಗೆ ಸಿದ್ಧವಾಗಿದೆ.

ನೂತನ ತಾಲ್ಲೂಕಿನಲ್ಲಿ ಒಟ್ಟು 63 ಗ್ರಾಮಗಳ 136 ಶಾಲೆಗಳಲ್ಲಿ ಒಟ್ಟು 15,176 ವಿದ್ಯಾರ್ಥಿಗಳು ಓದುತ್ತಿದ್ದಾರೆ. ನೂತನ ಕಚೇರಿಗೆ ವಿವಿಧ ಶಾಲೆಗಳ ಮತ್ತು ದಾನಿಗಳು ಅನೇಕ ಪೀಠೋಪಕರಣಗಳು ನೀಡಿದ್ದಾರೆ. ಹಿರೇಕೆರೂರ ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಸವರಾಜಪ್ಪ ನೂತನ ಕಟ್ಟಡಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಿದರು. ಶಿಕ್ಷಣ ಸಂಯೋಜಕ ಎಚ್.ಎಚ್.ಜಾಡರ, ವಿ.ಆರ್.ಪೂಜಾರ ಹಾಗೂ ಎ.ಎಂ.ರಶ್ಮಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.