2015ರಲ್ಲಿ ದೇಶದಾದ್ಯಂತ ಒಟ್ಟು 1.56 ಕೋಟಿ ಗರ್ಭಪಾತ ಪ್ರಕರಣಗಳು ಬೆಳಕಿಗೆ

7

2015ರಲ್ಲಿ ದೇಶದಾದ್ಯಂತ ಒಟ್ಟು 1.56 ಕೋಟಿ ಗರ್ಭಪಾತ ಪ್ರಕರಣಗಳು ಬೆಳಕಿಗೆ

Published:
Updated:
2015ರಲ್ಲಿ ದೇಶದಾದ್ಯಂತ ಒಟ್ಟು 1.56 ಕೋಟಿ ಗರ್ಭಪಾತ ಪ್ರಕರಣಗಳು ಬೆಳಕಿಗೆ

ನವದೆಹಲಿ: 2015ರಲ್ಲಿ ದೇಶದಾದ್ಯಂತ ಒಟ್ಟು 1.56 ಕೋಟಿ ಗರ್ಭಪಾತ ಪ್ರಕರಣಗಳು ಬೆಳಕಿಗೆ ಬಂದಿವೆ ಎಂಬ ಮಾಹಿತಿ ಸಂಸತ್‌ನಲ್ಲಿ ಪ್ರಕಟವಾಗಿದೆ.

‘ಲ್ಯಾನ್ಸೆಟ್‌ ಗ್ಲೋಬಲ್‌ ಹೆಲ್ತ್‌ ಮೆಡಿಕಲ್‌ ನಿಯತಕಾಲಿಕೆ 2015ರಲ್ಲಿ ದೇಶದಾದ್ಯಂತ 1.56 ಕೋಟಿ ಗರ್ಭಪಾತ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ವರದಿ ಮಾಡಿದೆ. ಈ ವರದಿಯನ್ನು ಆರು ರಾಜ್ಯಗಳಲ್ಲಿ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಈ ವರದಿ ತಯಾರಿಸಲಾಗಿದ್ದು, ದೇಶದ ಸಂಪೂರ್ಣ ಅಂಕಿ ಅಂಶವನ್ನು ಅಧ್ಯಯನಕ್ಕೆ ಬಳಸಿಕೊಂಡಿಲ್ಲ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಖಾತೆ ಸಚಿವ ಅಶ್ವಿನಿ ಕುಮಾರ್‌ ಚೌಬೆ ಲೋಕಸಭೆಗೆ ಪತ್ರದ ಮೂಲಕ ತಿಳಿಸಿದ್ದಾರೆ.

ಸುರಕ್ಷಿತ  ಗರ್ಭಪಾತಕ್ಕೆ ಬೇಕಾದ ಆರೋಗ್ಯ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ ಎಂದು ಹೇಳಿದ ಅವರು, ‘ರಹಸ್ಯ ಗರ್ಭಪಾತಗಳು, ಕಳಂಕದ ಭಯ, ವೈದ್ಯರ ಸಲಹೆ ಪಡೆಯದಿರುವುದು ಇಂತಹ ಹಲವು ಕಾರಣಗಳು ಅಸುರಕ್ಷಿತ ಗರ್ಭಪಾತಕ್ಕೆ ಕಾರಣವಾಗುತ್ತಿವೆ. ಇಂತಹ ಹಲವು ಗರ್ಭಪಾತ ಪ್ರಕರಣಗಳ ಮಾಹಿತಿ ಲಭ್ಯವಾಗಿಲ್ಲ’ ಎಂದೂ ತಿಳಿಸಿದ್ದಾರೆ.

ಗರ್ಭಪಾತಕ್ಕಾಗಿ ಆಗತ್ಯ ಸೇವೆಗಳನ್ನು ಒದಗಿಸಲು ರಾಜ್ಯಗಳಿಗೆ ರಾಷ್ಟ್ರೀಯ ಆರೋಗ್ಯ ಮಿಷನ್‌(ಎನ್ಎಚ್‌ಎಂ) ಬೆಂಬಲ ನೀಡುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry