ಬುಧವಾರ, ಆಗಸ್ಟ್ 5, 2020
21 °C

ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ನೆರವು ಸ್ಥಗಿತ: ಪಾಕಿಸ್ತಾನಕ್ಕೆ ಅಮೆರಿಕ ಎಚ್ಚರಿಕೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ನೆರವು ಸ್ಥಗಿತ: ಪಾಕಿಸ್ತಾನಕ್ಕೆ ಅಮೆರಿಕ ಎಚ್ಚರಿಕೆ

ವಾಷಿಂಗ್ಟನ್‌: ಪಾಕಿಸ್ತಾನವು ತಾಲಿಬಾನ್‌ ಮತ್ತು ಹಖಾನಿ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ನೆರವು ಸ್ಥಗಿತಗೊಳಿಸುವುದಾಗಿ ಅಮೆರಿಕ ಎಚ್ಚರಿಸಿದೆ.

ಅಮೆರಿಕವು ಪಾಕಿಸ್ತಾನಕ್ಕೆ ₹ 12 ಸಾವಿರ ಕೋಟಿ (2 ಬಿಲಿಯನ್‌ ಡಾಲರ್) ಸೇನಾ ನೆರವನ್ನು ತಡೆ ಹಿಡಿದಿರುವ ಬೆನ್ನಲ್ಲೇ ಶ್ವೇತ ಭವನದಿಂದ ಈ ಎಚ್ಚರಿಕೆ ಹೊರಬಿದ್ದಿದೆ.

ಪಾಕಿಸ್ತಾನವು ತಾಲಿಬಾನ್‌, ಹಖಾನಿ ಜಾಲ ಸೇರಿದಂತೆ ಎಲ್ಲಾ ಉಗ್ರ ಸಂಘಟನೆಗಳಿಗೆ ಸುರಕ್ಷಿತ ಅಡಗುದಾಣವಾಗಿದೆ ಎಂದಿರುವ ಅಮೆರಿಕ ಈ ಅಡಗುದಾಣಗಳನ್ನು ತೆರವುಗೊಳಿಸಬೇಕು ಎಂದು ಎಚ್ಚರಿಕೆ ನೀಡಿದೆ.

‘ಮುಂಬರುವ ದಿನಗಳಲ್ಲಿ ಪಾಕಿಸ್ತಾನಕ್ಕೆ ನೆರವು ಸ್ಥಗಿತಗೊಳಿಸುವ ಮಸೂದೆಯನ್ನು ನಾನು ಮಂಡಿಸಲಿದ್ದೇನೆ. ಇದರಿಂದ ಪಾಕಿಸ್ತಾನಕ್ಕೆ ಹೋಗುವ ಹಣ ನಮ್ಮ ದೇಶದ ರಸ್ತೆ, ಸೇತುವೆ ನಿರ್ಮಾಣದ ಮೂಲಸೌಕರ್ಯ ನಿಧಿಗೆ ಬಳಕೆಯಾಗಲಿದೆ’ ಎಂದು ಅಮೆರಿಕದ ಸೆನೆಟರ್ ರ‍್ಯಾಂಡ್ ಪೌಲ್ ಹೇಳಿದ್ದಾರೆ.

‘ಇದು ಒಳ್ಳೆಯ ಯೋಚನೆ’ ಎಂಬ ಬರಹದೊಂದಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ರ‍್ಯಾಂಡ್ ಪೌಲ್ ಹೇಳಿಕೆಯ ಟ್ವೀಟ್‌ ಅನ್ನು ರಿಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.