ಹಿಂದೂ–ಮುಸ್ಲಿಂಮರು ಕಾದಾಡುವುದನ್ನೆ ವಿಎಚ್‌ಪಿ ಮತ್ತು ಆರ್‌ಎಸ್‌ಎಸ್‌ ಬಯಸುತ್ತವೆ : ಸ್ವರೂಪಾನಂದ ಸರಸ್ವತಿ ಸ್ವಾಮೀಜಿ

7

ಹಿಂದೂ–ಮುಸ್ಲಿಂಮರು ಕಾದಾಡುವುದನ್ನೆ ವಿಎಚ್‌ಪಿ ಮತ್ತು ಆರ್‌ಎಸ್‌ಎಸ್‌ ಬಯಸುತ್ತವೆ : ಸ್ವರೂಪಾನಂದ ಸರಸ್ವತಿ ಸ್ವಾಮೀಜಿ

Published:
Updated:
ಹಿಂದೂ–ಮುಸ್ಲಿಂಮರು ಕಾದಾಡುವುದನ್ನೆ ವಿಎಚ್‌ಪಿ ಮತ್ತು ಆರ್‌ಎಸ್‌ಎಸ್‌ ಬಯಸುತ್ತವೆ : ಸ್ವರೂಪಾನಂದ ಸರಸ್ವತಿ ಸ್ವಾಮೀಜಿ

ಲಖನೌ: ‘ದೇಶದಲ್ಲಿನ ಹಿಂದೂ–ಮುಸ್ಲಿಂಮರು ಸದಾಕಾಲ ಕಚ್ಚಾಡುತಿರಬೇಕೆಂದು ವಿಶ್ವ ಹಿಂದೂ ಪರಿಷತ್ತು(ವಿಎಚ್‌ಪಿ) ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಸಂಘಟನೆಗಳು ಬಯಸುತ್ತವೆ ಎಂದು ಶಂಕರಾಚಾರ್ಯ ದ್ವಾರಕ ಪೀಠದ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.

ಅಲಹಬಾದ್‌ನಲ್ಲಿ ಅಯೋಧ್ಯೆಯ ರಾಮಜನ್ಮಭೂಮಿಯ ಕುರಿತು ಮಾತನಾಡಿದ ಅವರು, ‘ನನ್ನ ಸಲಹೆ ಮೇರೆಗೆ ಪ್ರಧಾನಿಯಾಗಿದ್ದ ರಾಜೀವ್‌ ಗಾಂಧಿ ಅವರು ಅಯೋಧ್ಯೆಯಲ್ಲಿನ ವಿವಾದಿತ ಜಮೀನಿನ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟರು. ಅದನ್ನೇ ಈ ಸಂಘಟನೆಗಳು ಜಯವೆಂದು ಭಾವಿಸಿ, ವಿಜಯೋತ್ಸವ ನಡೆಸಿ ಮುಸ್ಲಿಂಮರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದರು. ಈ ಸಂಘಟನೆಗಳಿಂದಲೇ ರಾಮಮಂದಿರ ನಿರ್ಮಾಣ ಹೋರಾಟ ದುರ್ಬಲಗೊಂಡಿದೆ’ ಎಂದು ಆರೋಪಿಸಿದರು.

‘ಅಸಾದುದ್ದೀನ್‌ ಓವೈಸಿಯಂತ ಮುಖಂಡರು ವಿವಾದಾತ್ಮಕ ಹೇಳಿಕೆ ನೀಡುವುದನ್ನೆ ಇವರು ಕಾಯುತ್ತಾರೆ. ಆ ಹೇಳಿಕೆಗಳನ್ನೆ ದೊಡ್ಡದು ಮಾಡಿ, ಹಿಂದೂಗಳು ಮುಸ್ಲಿಂಮರನ್ನು ದ್ವೇಷಿಸುವಂತೆ ಮಾಡುತ್ತಾರೆ’ ಎಂದರು.

‘ರಾಮನ ಜನ್ಮಸ್ಥಳದ ಕುರಿತು ಸ್ಕಂದ ಪುರಾಣದಲ್ಲಿ ಸಾಕಷ್ಟು ಪುರಾವೆಗಳಿವೆ. ವಿವಾದಿತ ಸ್ಥಳವೇ ರಾಮನ ಜನ್ಮಸ್ಥಳವೆಂದು ಆಧಾರಗಳ ಸಮೇತ ಸಾಬಿತುಪಡಿಸಬಲ್ಲೆ. ವಿವಾದಿತ ಸ್ಥಳದಲ್ಲಿ ಮಸೀದಿನೆ ಇರಲಿಲ್ಲ. ಇಲ್ಲಿನ ಜಮೀನನ್ನು ಮೂರು ಭಾಗವಾಗಿಸಿ ರಾಮಲಲ್ಲಾ, ನಿರ್ಮೋಹಿ ಅಖಾರ ಮತ್ತು ಮುಸ್ಲಿಂರಿಗೆ ಹಂಚಿಕೆ ಮಾಡಬೇಕೆಂದು ಹೈಕೋರ್ಟ್‌ ಆದೇಶಿಸಿದೆ. ಆದರೆ, ನಮಗೆ ಅಷ್ಟೂ ಜಾಗ ರಾಮಮಂದಿರ ನಿರ್ಮಾಣಕ್ಕೆ ಬೇಕು’ ಎಂದು ಒತ್ತಾಯಿಸಿದರು.

‘ನಾನು ಮುಸ್ಲಿಂ ವಿರೋಧಿಯಲ್ಲ. ತೊಂದರೆಗಳು ಉಂಟಾಗುವುದನ್ನು ತಡೆಯಬೇಕಾದರೆ ದೇವಸ್ಥಾನ ಪಕ್ಕದಲ್ಲಿ ಮಸೀದಿ ನಿರ್ಮಿಸಬಾರದು’ ಎಂದರು.

‘ಮಸೀದಿಯೊಂದು ಬಿದ್ದಾಗ, ಅದಕ್ಕೆ ಪರಿಹಾರ ಪಡೆದುಕೊಂಡು ಬೇರೆ ಕಡೆ ಮಸೀದಿ ನಿರ್ಮಿಸಿದ ಉದಾಹರಣೆಗಳು ಮುಸ್ಲಿಂ ಆಡಳಿತಗಾರರ ಕಾಲದಲ್ಲಿಯೇ ನಡೆದಿವೆ’ ಎಂದರು.

––––––––––––––––

Swaroopanand Saraswati Alleges VHP, RSS Have Weakened The Ram Mandir MovementLucknow: The Shankaracharya of Dwarka Peeth, Swaroopanand Saraswati, has alleged that the Vishwa Hindu Parishad (VHP) and Rashtriya Swayamsewak Sangh (RSS) have weakened the Ram Mandir movement.

He has also claimed that the lock of the disputed site was opened by former Prime Minister of India Rajiv Gandhi, after consulting him.

Speaking to media in Allahabad, Swaroopanand said, “The locks were opened by Rajiv Gandhi after my consultation. But RSS and VHP people took out victory procession which, in turn, hurt the sentiments of the Muslim community. They have weakened the Ram Mandir movement. They want Hindus and Muslims to always fight among themselves. That is why they make sure that people like Owaisi continue to spit venom so that Hindus continue to hate Muslims.”

Speaking further on the Ram Mandir issue, Swaroopanand said that there was enough evidence in the Skanda Puran about the birthplace of Lord Ram.

“We have enough proof that the disputed site is the birthplace of Lord Ram and we will prove it. There was no mosque ever on the disputed site. As per the decision of the High Court, the land of Ram Janam Bhoomi has been divided into three parts – the middle portion has been given to Ram Lala, one to the Nirmohi Akhara and the third was given to the Muslims. But we want that the entire land should be given for the Ram Temple.”

 

“I am not against Muslims, but if they build a mosque next to a temple then there will always be a problem. That is why a mosque should not be built next to the temple,” he added.

 

Swaroopananad also gave the example of a Muslim ruler who had said that if a Mosque is broken then they can take compensation and build another in some other place. He also claimed that his side was confident that they will prove that the disputed site is the real birthplace of Lord Ram.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry