ಚಂದ್ರನ ಮನವಿ!

7

ಚಂದ್ರನ ಮನವಿ!

Published:
Updated:
ಚಂದ್ರನ ಮನವಿ!

ಗರ ಗರ ತಿರುಗುವೆ ಆಗಸದಲ್ಲಿ

ಜೊತೆಯಲಿ ನನಗೆ ಯಾರಿಲ್ಲ!

ದೂರದಿ ಇರುವನು ದಿನಕರನು

ಹತ್ತಿರ ಹೋಗಲು ಹೆದರುವೆನು

ಯಾಕೋ ಏನೋ ಸಿಟ್ಟಿನಲಿ

ಬೆಂಕಿಯ ಅವನು ಉಗುಳುವನು.

ದೂರದಿ ಕೋಟಿ ತಾರೆಗಳು

ಕಣ್ಣನು ಮಿಟುಕಿಸಿ ಕರೆಯುವವು.

ಎಲ್ಲವ ಮರೆತು ಹೋದರೆ ಅಲ್ಲಿ

ದಿನವೂ ಅಮವಾಸ್ಯೆ ಭುವಿಯಲ್ಲಿ!

ಬಿಲಿಯನ್‌ಗಟ್ಟಲೆ ಜನರು ಜಗದಲ್ಲಿ

ಇದ್ದುಬಿಡಿ ಬಂದು ಜೊತೆಯಲ್ಲಿ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry