ನಿದ್ರೆಗೆಟ್ಟ ನಾಯಕರಿಗೆ ನಿರಾಸೆ!

7

ನಿದ್ರೆಗೆಟ್ಟ ನಾಯಕರಿಗೆ ನಿರಾಸೆ!

Published:
Updated:

ಯಾದಗಿರಿ: ಕಾಂಗ್ರೆಸ್ ಹಿರಿಯ ಶಾಸಕ ಡಾ.ಎ.ಬಿ. ಮಾಲಕರಡ್ಡಿ ಅವರು ಆಗಾಗ ಮಾಧ್ಯಮದವರ ಮುಂದೆ ತಮ್ಮದೇ ಪಕ್ಷದ ವಿರುದ್ಧ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅಸಮಾಧಾನ ತೋಡಿಕೊಂಡದ್ದಿದೆ. ಇಂಥ ಸಂದರ್ಭಗಳಲ್ಲೆಲ್ಲ, ‘ಶಾಸಕರು ಪಕ್ಷ ತ್ಯಜಿಸಬಹುದೇ’ ಎಂಬ ಅನುಮಾನ ಕಾರ್ಯಕರ್ತರನ್ನು ಕಾಡುತ್ತಿತ್ತು.

ಶಾಸಕರ ಈ ನಡೆಯಿಂದ, ಚುನಾವಣಾ ಟಿಕೆಟ್‌ಗಾಗಿ 40 ವರ್ಷಗಳಿಂದ ಕಾಯುತ್ತಿರುವ ಎರಡನೇ ಸಾಲಿನ ಮುಖಂಡರು ಒಳಗೊಳಗೇ ಖುಷಿ ಅನುಭವಿಸಿ, ಟಿಕೆಟ್ ತರುವ ಕಸರತ್ತು ನಡೆಸಿದ್ದರು. ಶಾಸಕರಿಗೆ ತಿಳಿಯದಂತೆ ರಾತ್ರೋರಾತ್ರಿ ಸಭೆ ನಡೆಸಿ ಟಿಕೆಟಿಗಾಗಿ ಯಾರನ್ನು ಓಲೈಸಬೇಕು ಎಂದು ನಿದ್ರೆಗೆಟ್ಟು ಲೆಕ್ಕಾಚಾರ ಹಾಕಿದ್ದರು.

ಆದರೆ, ಸರ್ಕಾರದ ಸಾಧನಾ ಸಂಭ್ರಮ ಕಾರ್ಯಕ್ರಮಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಬಂದಿದ್ದಾಗ, ಮಾಲಕರಡ್ಡಿ ಅವರು ಹೆಲಿಪ್ಯಾಡ್‌ವರೆಗೂ ಅವರನ್ನು ಹಿಂಬಾಲಿಸಿದ್ದರು. ಇದು ಕಾರ್ಯಕರ್ತರಲ್ಲಿ ಅಚ್ಚರಿ ಮೂಡಿಸಿತ್ತು. ಹೆಲಿಪ್ಯಾಡ್‌ನಿಂದ ವಾಪಸಾದ ಶಾಸಕರ ಆಪ್ತ ಸಹಾಯಕ, ‘ಈ ಬಾರಿಯೂ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರು ಶಾಸಕರಿಗೆ ಸೂಚಿಸಿದ್ದಾರೆ’ ಎಂದು ಹೇಳಿದೊಡನೆ ಎರಡನೇ ಸಾಲಿನ ನಾಯಕರ ಮುಖ ಹುಳ್ಳಗಾಯಿತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry