ಮಂಗಳವಾರ, ಆಗಸ್ಟ್ 4, 2020
22 °C

ನಾನು ಸ್ಥಿರ ಮನಸಿನ ಪ್ರತಿಭಾಶಾಲಿ, ಬುದ್ಧಿವಂತ: ಟ್ರಂಪ್

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ನಾನು ಸ್ಥಿರ ಮನಸಿನ ಪ್ರತಿಭಾಶಾಲಿ, ಬುದ್ಧಿವಂತ: ಟ್ರಂಪ್

ವಾಷಿಂಗ್ಟನ್: ‘ನಾನು ಸ್ಥಿರ ಮನಸಿನ ಪ್ರತಿಭಾಶಾಲಿ ಮತ್ತು ಬುದ್ಧಿವಂತ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮನ್ನು ಹೊಗಳಿಕೊಂಡಿದ್ದಾರೆ. ತನ್ಮೂಲಕ ತಮ್ಮ ಮಾನಸಿಕ ಸ್ಥಿರತೆಯನ್ನು ಪ್ರಶ್ನಿಸಿದವರಿಗೆ ತಿರುಗೇಟು ನೀಡಿದ್ದಾರೆ.

ಟ್ರಂಪ್ ಅವರ ಮಾನಸಿಕ ಆರೋಗ್ಯವನ್ನು ಪ್ರಶ್ನಿಸಿ ಬಿಡುಗಡೆ ಮಾಡಲಾಗಿರುವ ಪುಸ್ತಕದ ಬಗ್ಗೆ ಅವರು ಸರಣಿ ಟ್ವೀಟ್‌ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ.

‘ಇಡೀ ಜೀವನದಲ್ಲಿ ನನ್ನ ಎರಡು ಅತ್ಯುತ್ತಮ ಸ್ವತ್ತುಗಳೆಂದರೆ ಮಾನಸಿಕ ಸ್ಥರತೆ ಮತ್ತು ಬುದ್ಧಿಮತ್ತೆ. ಯಶಸ್ವಿ ಉದ್ಯಮಿಯಾದಲ್ಲಿಂದ ತೊಡಗಿ ನಾನು ಟಿ.ವಿ. ಸ್ಟಾರ್ ಆದೆ. ನಂತರ ಮೊದಲ ಪ್ರಯತ್ನದಲ್ಲೇ ಅಮೆರಿಕದ ಅಧ್ಯಕ್ಷನಾದೆ. ನಾನು ಬುದ್ಧಿವಂತ, ಪ್ರತಿಭಾಶಾಲಿ... ಸ್ಥಿರ ಮನಸಿನ ಪ್ರತಿಭಾಶಾಲಿ’ ಎಂದು ಟ್ರಂಪ್ ಟ್ವೀಟ್‌ ಮಾಡಿದ್ದಾರೆ.

ಮೈಕೆಲ್ ವೋಲ್ಫ್ ಅವರ ‘ಫೈರ್ ಆ್ಯಂಡ್ ಫರಿ: ಇನ್‌ಸೈಡ್ ದ ಟ್ರಂಪ್ ವೈಟ್ ಹೌಸ್’ ಪುಸ್ತಕ ಶುಕ್ರವಾರ ಮಾರುಕಟ್ಟೆಗೆ ಲಗ್ಗೆಯಿಟ್ಟಿತ್ತು. ಪುಸ್ತಕ ಮಾರುಕಟ್ಟೆಗೆ ಬಿಡುಗಡೆಯಾಗದಂತೆ ತಡೆಯುವಲ್ಲಿ ಟ್ರಂಪ್ ಆಡಳಿತ ವಿಫಲವಾಗಿತ್ತು. ಟ್ರಂಪ್ ಅವರ ಮಾನಸಿಕ ಆರೋಗ್ಯದ ಬಗ್ಗೆ ಈ ಪುಸ್ತಕದಲ್ಲಿ ಪ್ರಶ್ನಿಸಲಾಗಿದೆ. ಈ ಪುಸ್ತಕ ಸಂಪೂರ್ಣ ಸುಳ್ಳುಗಳಿಂದ ಕೂಡಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.

ಟ್ರಂಪ್ ಅವರು ಅಮೆರಿಕದ ಅಧ್ಯಕ್ಷನಾಗಿ ಆಯ್ಕೆಯಾದ ಸಂದರ್ಭದಲ್ಲೂ ಅವರ ಮಾನಸಿಕ ಆರೋಗ್ಯದ ಬಗ್ಗೆ ಚರ್ಚೆಯಾಗಿತ್ತು. ಟ್ರಂಪ್ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಬೇಕು ಎಂಬ ಆಗ್ರಹವೂ ವ್ಯಕ್ತವಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.