ಶ್ರೀನಗರದಲ್ಲಿ ಹಿಮಕುಸಿತ: ಹನ್ನೊಂದು ಸಾವು

7

ಶ್ರೀನಗರದಲ್ಲಿ ಹಿಮಕುಸಿತ: ಹನ್ನೊಂದು ಸಾವು

Published:
Updated:

ಶ್ರೀನಗರ: ಹಿಮಕುಸಿತದಲ್ಲಿ ಸಿಲುಕಿ ಮೃತಪಟ್ಟ ಹನ್ನೊಂದು ಮಂದಿಯ ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಪ್ವಾರಾ–ತಂಗಧರ್‌ ರಸ್ತೆಯ ಖೂನಿ ನಲ್ಲಾಹ್‌ ಬಳಿ ಶುಕ್ರವಾರ ಸಂಭವಿಸಿದ ಹಿಮಕುಸಿತದಲ್ಲಿ ಪ್ರಯಾಣಿಕ ವಾಹನವೊಂದು ಸಿಲುಕಿತ್ತು. ಮೂವರನ್ನು ರಕ್ಷಿಸಿದ್ದ ಪೊಲೀಸರು, ನಾಪತ್ತೆಯಾದವರ ಶೋಧ ಕಾರ್ಯ ನಡೆಸಿದ್ದರು. ಒಂದು ಮೃತ ದೇಹವನ್ನು ಶುಕ್ರವಾರವೇ ಹೊರತೆಗೆಯಲಾಗಿತ್ತು. ಶನಿವಾರ ಹತ್ತು ಮೃತದೇಹಗಳನ್ನು ಪತ್ತೆ ಮಾಡಲಾಗಿದೆ ಎಂದು ಕುಪ್ವಾರಾ ಉಪಆಯುಕ್ತ ಖಲಿದ್ ಜಹಾಂಗೀರ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry