ಭರತ್‌ ಚಿಪ್ಲಿ ಮಿಂಚು

7

ಭರತ್‌ ಚಿಪ್ಲಿ ಮಿಂಚು

Published:
Updated:
ಭರತ್‌ ಚಿಪ್ಲಿ ಮಿಂಚು

ಹುಬ್ಬಳ್ಳಿ: ಮುಂಡಗೋಡ ಮಾನ್‌ಸ್ಟಾರ್ಸ್‌ ಮತ್ತು ಶಿರಸಿಯ ನಿಲೇಕಣಿ ಚಾಲೆಂಜರ್ಸ್‌ ತಂಡಗಳು ಹುಬ್ಬಳ್ಳಿ ಪ್ರೀಮಿಯರ್‌ ಲೀಗ್‌ (ಎಚ್‌ಪಿಎಲ್‌) ಟೂರ್ನಿಯ ಮೂರನೇ ಆವೃತ್ತಿಯ ತಮ್ಮ ಮೊದಲ ಪಂದ್ಯಗಳಲ್ಲಿ ಗೆದ್ದವು.

ರಾಜನಗರದ ಕೆ.ಎಸ್‌.ಸಿ.ಎ. ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮುಂಡಗೋಡ ತಂಡ ಮೊದಲು ಬ್ಯಾಟ್‌ ಮಾಡಿ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 179 ರನ್ ಗಳಿಸಿತು. ಎದುರಾಳಿ ಹುಬ್ಬಳ್ಳಿ ಸ್ಕೈಟೌನ್‌ ಬ್ಯಾಷರ್ಸ್‌ ತಂಡ 121 ರನ್‌ ಗಳಿಸಿ ತನ್ನ ಹೋರಾಟ ಮಗಿಸಿತು. ಅನುಭವಿ ಬ್ಯಾಟ್ಸ್‌ಮನ್‌ ಭರತ್‌ ಚಿಪ್ಲಿ 46 ಎಸೆತಗಳಲ್ಲಿ 89 ರನ್ ಗಳಿಸಿದರು.

ದಿನದ ಇನ್ನೊಂದು ಪಂದ್ಯದಲ್ಲಿ ಧಾರವಾಡದ ಸ್ವರ್ಣ ಸ್ಟ್ರೈಕರ್ಸ್‌ ಮೊದಲು ಬ್ಯಾಟ್‌ ಮಾಡಿ 19.2 ಓವರ್‌ಗಳಲ್ಲಿ 137 ರನ್ ಗಳಿಸಿತು. ಈ ಗುರಿಯನ್ನು ಶಿರಸಿಯ ನಿಲೇಕಣಿ ಚಾಲೆಂಜರ್ಸ್‌ ತಂಡ 18.4 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ತಲುಪಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry