ನಾಲ್ವಡಿ ಕೃಷ್ಣರಾಜ ಒಡೆಯರ್ ಕಪ್‌ಗಾಗಿ ಸೆಣಸಾಟ

7

ನಾಲ್ವಡಿ ಕೃಷ್ಣರಾಜ ಒಡೆಯರ್ ಕಪ್‌ಗಾಗಿ ಸೆಣಸಾಟ

Published:
Updated:

ಪಾಂಡವಪುರ: ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ‘ನಾಲ್ವಡಿ ಕೃಷ್ಣರಾಜ ಒಡೆಯರ್ ಕಪ್‌’ಗಾಗಿ ನಡೆಯುತ್ತಿರುವ ಪ್ರೊ ಕಬಡ್ಡಿಯಲ್ಲಿ 8 ತಂಡಗಳು ಲೀಗ್‌ ಪಂದ್ಯದಲ್ಲಿ ಸೆಣಸಿದವು.

ಮೊದಲ ಸುತ್ತಿನಲ್ಲಿ ಕನ್ನಂಬಾಡಿ ಮತ್ತು ಮೇಲುಕೋಟೆ ಮಾಣಿಕ್ಯ ತಂಡಗಳು ಸೆಣಸಾಡಿದವು. ಕನ್ನಂಬಾಡಿ 43 ಅಂಕಗಳು ಮತ್ತು ಮೇಲುಕೋಟೆ ಮಾಣಿಕ್ಯ 31 ಅಂಕಗಳನ್ನು ಪಡೆದವು. ಬೇಬಿಬೆಟ್ಟ ಮತ್ತು ಕುಂತಿಬೆಟ್ಟ ತಂಡಗಳು ಸೆಣಸಾಡಿ ಬೇಬಿಬೆಟ್ಟ 42 ಅಂಕಗಳು ಮತ್ತು ಕುಂತಿಬೆಟ್ಟ 32 ಅಂಕಗಳನ್ನು ಗಳಿಸಿದವು. ಫ್ರೆಂಚ್‌ರಾಕ್ಸ್ ಮತ್ತು ಕಾವೇರಿ ತಂಡಗಳು ಸೆಣಸಾಡಿ ಫ್ರೆಂಚ್‌ರಾಕ್ಸ್ 42 ಮತ್ತು ಕಾವೇರಿ 32 ಅಂಕಗಳನ್ನು ಗಳಿಸಿದವು.

ಎರಡನೇ ಸುತ್ತಿನಲ್ಲಿ ಬೇಬಿಬೆಟ್ಟ ಮತ್ತು ಸಕ್ಕರೆ ಸೀಮೆ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬೇಬಿಬೆಟ್ಟ 46 ಮತ್ತು ಸಕ್ಕರೆ ಸೀಮೆ 36 ಅಂಕಗಳನ್ನು ಪಡೆದವು.

ಕಾವೇರಿ ಮತ್ತು ಮೇಲುಕೋಟೆ ಮಾಣಿಕ್ಯ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಾವೇರಿ 31 ಮತ್ತು ಮೇಲುಕೋಟೆ 28 ಅಂಕಗಳನ್ನು ಗಳಿಸಿದವು. ಕನ್ನಂಬಾಡಿ ಮತ್ತು ಫ್ರೆಂಚ್‌ ರಾಕ್ಸ್‌ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕನ್ನಂಬಾಡಿ 41 ಮತ್ತು ಫ್ರೆಂಚ್‌ರಾಕ್ಸ್ ತಂಡವು 38 ಅಂಕಗಳನ್ನು ಗಳಿಸಿದವು.

ಶನಿವಾರ ರಾತ್ರಿ ನಡೆದ ಮೂರನೇ ಸುತ್ತಿನಲ್ಲಿ ಕುಂತಿಬೆಟ್ಟ ಮತ್ತು ಮುತ್ತಿನ ಕೆರೆ ತಂಡಗಳು, ಕಾವೇರಿ ಮತ್ತು ಕನ್ನಂಬಾಡಿ ತಂಡಗಳು, ಬೇಬಿ ಮತ್ತು ಮುತ್ತಿನಕೆರೆ ತಂಡಗಳು ಹಾಗೂ ಕುಂತಿಬೆಟ್ಟ ಮತ್ತು ಸಕ್ಕರೆ ಸೀಮೆ ತಂಡಗಳು ಸೆಣಸಾಡಿದವು.

ಭಾನುವಾರ ಬೆಳಿಗ್ಗೆ ಮತ್ತೊಂದು ಸುತ್ತಿನ ಲೀಗ್‌ ಪಂದ್ಯಗಳು ನಡೆಯಲಿದ್ದು, ಸಂಜೆ ಸೆಮಿಫೈನಲ್‌ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ. ಪ್ರೊ ಕಬಡ್ಡಿಯ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ನಡೆಯಲಿದೆ.

ಬೇಬಿಬೆಟ್ಟ ತಂಡದಲ್ಲಿ ರತನ್‌, ಸಕ್ಕರೆಸೀಮೆ ತಂಡದಲ್ಲಿ ಮನೋಜ್‌ಕುಮಾರ್, ಕಾವೇರಿ ತಂಡದಲ್ಲಿ ರಾಕೇಶ್‌, ಮೇಲುಕೋಟೆ ತಂಡದಲ್ಲಿ ಸ್ವಾರ್ಥಿಕ್‌, ಕನ್ನಂಬಾಡಿ ತಂಡದಲ್ಲಿ ಮಿಥುನ್‌ಗೌಡ, ಫ್ರೆಂಚ್‌ ರಾಕ್ಸ್‌ ತಂಡದಲ್ಲಿ ಜಸ್ವಂತ್ ಹಾಗೂ ಕುಂತಿಬೆಟ್ಟ ತಂಡದಲ್ಲಿ ಸಂದೀಪ್ ಅವರು ಉತ್ತಮ ಆಟಗಾರರಾಗಿ ಹೆಸರು ಗಳಿಸಿದ್ದಾರೆ.

ಜ.7ರಂದು ಪಂದ್ಯಗಳು ಮುಕ್ತಾಯಗೊಳ್ಳಲಿವೆ. ಪಾಂಡವ ಕ್ರೀಡಾಂಗಣವು ಕ್ರೀಡಾಭಿಮಾನಿಗಳಿಂದ ತುಂಬಿ ತುಳುಕುತ್ತಿದ್ದು, 5 ಸಾವಿರಕ್ಕೂ ಹೆಚ್ಚು ಕ್ರೀಡಾಸಕ್ತರು ಪಂದ್ಯಗಳನ್ನು ವೀಕ್ಷಿಸಿದರು.

ಕಬಡ್ಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತವಾಗಲಿ

ಪಾಂಡವಪುರ: ಕಬಡ್ಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತವಾಗಲಿ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್‌ ಹೇಳಿದರು.

ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಪಾಂಡವಪುರದ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಪೋರ್ಟ್‌್ಸ ಕ್ಲಬ್, ರಾಜ್ಯ ಮತ್ತು ಮಂಡ್ಯ ಅಮೆಚೂರ್‌ ಕಬಡ್ಡಿ ಅಸೋಸಿಯೇಷನ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಗುರುವಾರ ರಾತ್ರಿ ಆರಂಭಗೊಂಡ ‘ಪಾಂಡವಪುರ ಪ್ರೊ ಕಬಡ್ಡಿ ಲೀಗ್‌ ಪಂದ್ಯಾವಳಿ’ಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಂಡ್ಯ ಅಮೆಚೂರ್‌ ಕಬಡ್ಡಿ ಅಸೋಸಿಯೇಷನ್‌ ಅಧ್ಯಕ್ಷ ಪಿ.ಎಂ.ಸೋಮಶೇಖರ್ ಮಾತನಾಡಿ, ‘ಪುಟ್ಟಣ್ಣಯ್ಯ ಚಳವಳಿ ಮತ್ತು ರಾಜಕಾರಣಕ್ಕೆ ಕಾಲಿಡದಿದ್ದರೆ ರಾಷ್ಟ್ರೀಯ ಕ್ರೀಡಾಪಟುವಾಗಿ ಹೊರಹೊಮ್ಮುತ್ತಿದ್ದರು’ ಎಂದರು.

ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, ‘ಸರ್ಕಾರ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕ್ರೀಡಾಪಟುಗಳಿಗೆ ಶೇ 10ರಷ್ಟು ಮೀಸಲಾತಿ ಕಾಯ್ದಿರಿಸಬೇಕು’ ಎಂದು ಒತ್ತಾಯಿಸಿದರು.ಸಮಾಜ ಸೇವಕ ಬಿ.ರೇವಣ್ಣ ಮಾತನಾಡಿದರು.

ಮಂಡ್ಯ ಅಮೆಚೂರು ಕಬಡ್ಡಿ ಅಸೋಸಿಯೇಷನ್‌ ಜಿಲ್ಲಾ ಕಾರ್ಯದರ್ಶಿ ಶಿವಲಿಂಗಪ್ಪ, ವಿದ್ಯಾಪ್ರಚಾರ ಸಂಘದ ಕಾರ್ಯದರ್ಶಿ ಕೆ.ವಿ.ಬಸವರಾಜು, ನಿರ್ದೇಶಕ ಗುಣಶೇಖರ್, ಉದ್ಯಮಿಗಳಾದ ಕೆ.ಸಿ.ಪರಮೇಶ್‌, ಎಚ್‌.ಕೃಷ್ಣೇಗೌಡ (ಕಿಟ್ಟಿ), ಗುತ್ತಿಗೆದಾರ ರವಿಬೋಜೇಗೌಡ, ಎಚ್.ಎನ್.ವಿಜಯಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry