‘ನಾಡು–ನುಡಿ ರಕ್ಷಣೆಗೆ ಸತತ ಹೋರಾಟ’

7

‘ನಾಡು–ನುಡಿ ರಕ್ಷಣೆಗೆ ಸತತ ಹೋರಾಟ’

Published:
Updated:

ನಿಡಗುಂದಿ: ರಾಜ್ಯದ ನಾಡು, ನುಡಿ, ಜಲದ ಸಂರಕ್ಷಣೆ ಮಾತ್ರ ಕನ್ನಡ ಹೋರಾಟಗಾರರ ಹೊಣೆಯಲ್ಲ. ಬಡವರ ಉದ್ದಾರ ಆನ್ಯಾಯಕ್ಕೆ ತುತ್ತಾದವರನ್ನು ಮೇಲಕ್ಕೆತ್ತಿ ಶೋಷಣೆರಹಿತ ಸಮಾಜವನ್ನು ಕಟ್ಟುವ ಕಾಯಕ ಪ್ರತಿಯೊಬ್ಬ ಹೋರಾಟಗಾರರ ಮೊದಲ ಆದ್ಯತೆಯಾಗಬೇಕು ಎಂದು ನವನಿರ್ಮಾಣ ಸೇನೆಯ ಮುಖಂಡ ಪುಂಡಲೀಕ ಮುರಾಳ ಹೇಳಿದರು.

ಪಟ್ಟಣದ ಬನಶಕಂರಿ ದೇವಸ್ಥಾನದ ಆವರಣದಲ್ಲಿ ನಡೆದ ನವನಿರ್ಮಾಣ ಸೇನೆಯ ತಾಲ್ಲೂಕು ಘಟಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಬಡವರ ಉದ್ದಾರದ ಹೆಸರಿನಲ್ಲಿ ನೂರಾರು ಯೋಜನೆಗಳು ಜಾರಿಯಾಗುತ್ತವೆ. ಆದರೆ ಆ ಯೋಜನೆಗಳು ಸಿರಿವಂತರ ಪಾಲಾಗುತ್ತವೆ. ಇದರಿಂದ ಬಡವರ ಹಕ್ಕನ್ನು ಸಿರಿವಂತ ಸಮರ್ಪಕವಾಗಿ ಬಳಸಿಕೊಂಡು ಇನ್ನೂ ಹೆಚ್ಚು ಸಿರಿವಂತನಾಗುತ್ತಿದ್ದಾನೆ. ಇದೊಂದು ರೀತಿ ಹಗಲು ದರೋಡೆಯಾಗಿದೆ ಎಂದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿರೇಶ ಗುರುಮಠ, ಹುಸೇನ್ ಮುಲಾ,್ಲ ಬಸವರಾಜ ಹಂಚಲಿ ಮಾತನಾಡಿ, ರಾಜ್ಯದಲ್ಲಿ ಅನೇಕ ಸಂಘಟನೆಗಳು ಆರಂಭವಾಗಿವೆ. ಆದರೆ, ರಾಜ್ಯದ ವಿಷಯ ಬಂದಾಗ ಕೆಲವೇ ಸಂಘಗಳು ಧ್ವನಿ ಎತ್ತುತ್ತವೆ. ಉಳಿದವುಗಳು ನೆಪಮಾತ್ರ ಎನ್ನುವ ಸಂಶಯ ಜನರಲ್ಲಿದೆ ಎಂದರು.

ದೇವಾಂಗ ಸಮಾಜದ ಮುಖಂಡರಾದ ವಿ.ವೈ ಅಂಕದ, ರಾಜುಗೌಡ ತುಂಬಗಿ, ಎಸ್.ಕೆ ಗೌಡರ ಇತರರು ಮಾತನಾಡಿದರು. ಬಸವರಾಜ ಹಳಮನಿ, ಸಂಗಮೇಶ ಗೌಡರ, ಸಂಗಯ್ಯ ಪತ್ರಿ, ಮುತ್ತು ರೂಢಗಿ, ಗಣೇಶ ಕೂಚಬಾಳ, ಬಸವರಾಜ ಸಕ್ರಿ, ಹುಚ್ಚೇಶ ಗೌಡರ, ರಫೀಕ್ ಮ್ಯಾಗೇರಿ, ಗಣೇಶ ಅಂಕದ, ಶ್ರೀನಾಥ ಬಣ್ಣದ, ಬಸವರಾಜ ಹುಬ್ಬಳ್ಳಿ, ಗಣೇಶ ಹಳಮನಿ, ಮಲ್ಲು ಗೌಡರ, ಶೀವು ಮಾಶೆಟ್ಟಿ, ನಾಗೇಶ ಬಸರಕೋಡ, ಮುತ್ತಣ್ಣ ಗೌಡರ, ಉಮೇಶ ಸಕ್ರಿ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.

ಸಮಾಜದ ಸೇವೆಯಲ್ಲಿ ತೊಡಗಿದ ಡಾ. ಬಾಲಚಂದ್ರ ಅಂಕದ, ಬಸವರಾಜ ಹಂಚಲಿ, ಯಾಸೀನ ಮುಲ್ಲಾ, ಶರಣು ಪತ್ರಿ ಅವರು ಸಂಘದ ವತಿಯಿಂದ ಗೌರವಿಸಲಾಯಿತು. ನಿಡಗುಂದಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ರಾಘವೇಂದ್ರ ಬಣ್ಣದ, ಕಾರ್ಯದರ್ಶಿಯಾಗಿ ಚಂದ್ರಶೇಖರ ಹಳಮನಿ ಅವರಿಗೆ ಸಂಘದ ಆದೇಶ ಪ್ರತಿಯನ್ನು ನೀಡಲಾಯಿತು. ಸಂಘದ ಅಧ್ಯಕ್ಷ ರಾಘವೇಂದ್ರ ಬಣ್ಣದ ಸ್ವಾಗತಿಸಿದರು. ಬಸವರಾಜ ಹಂಚಲಿ, ಯಾಸೀನ ಮುಲ್ಲಾ ನಿರೂಪಿಸಿ ವಂದಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry