ಬಾಂಗ್ಲಾ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸುವ ಕಾರ್ಯದಲ್ಲಿದೆ ಕಾಂಗ್ರೆಸ್‌: ಯಡಿಯೂರಪ್ಪ ಆರೋಪ

7

ಬಾಂಗ್ಲಾ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸುವ ಕಾರ್ಯದಲ್ಲಿದೆ ಕಾಂಗ್ರೆಸ್‌: ಯಡಿಯೂರಪ್ಪ ಆರೋಪ

Published:
Updated:
ಬಾಂಗ್ಲಾ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸುವ ಕಾರ್ಯದಲ್ಲಿದೆ ಕಾಂಗ್ರೆಸ್‌: ಯಡಿಯೂರಪ್ಪ ಆರೋಪ

ಬೆಂಗಳೂರು: ಸಿದ್ದರಾಮಯ್ಯ ವಿಘ್ನಸಂತೋಷಿ, ಅಭಿವೃದ್ಧಿಗೆ ನೆರವು ನೀಡುತ್ತಿಲ್ಲ ಎಂದು ಕೇಂದ್ರ ಸಚಿವ ಅನಂತಕುಮಾರ್ ಟೀಕಿಸಿದರು.

ನಗರದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಪ್ರಧಾನಿ ಮೋದಿ ಟಾಪ್ ಗೇರ್, ಮನಮೋಹನ ಸಿಂಗ್ ನ್ಯೂಟ್ರಲ್ ಗೇರ್, ಸಿದ್ದರಾಮಯ್ಯ ರಿವರ್ಸ್ ಗೇರ್. ಹೀಗಾಗಿ ರಾಜ್ಯದ ಅಭಿವೃದ್ಧಿ ಹಿಂದಕ್ಕೆ ಹೋಗಿದೆ. ನಿಮಗೆ ರಿವರ್ಸ್ ಗೇರ್ ವ್ಯಕ್ತಿ ಬೇಕಾ, ಟಾಪ್ ಗೇರ್ ವ್ಯಕ್ತಿ ಯಡಿಯೂರಪ್ಪ ಬೇಕಾ?’ ಎಂದು ಸಭಿಕರ ಮುಂದೆ ಪ್ರಶ್ನೆ ಇಟ್ಟರು.

ಎರಡೂವರೆ ಲಕ್ಷ ಬಾಂಗ್ಲಾ ವಲಸಿಗರು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ. ಅವರನ್ನು ಮತದಾರರ ಪಟ್ಟಿಗೆ ಸೇರಿಸುವ ಕೆಲಸವನ್ನು ಸಚಿವ ಜಾರ್ಜ್, ಶಾಸಕ ಬೈರತಿ ಬಸವರಾಜ್‌ಗೆ ವಹಿಸಲಾಗಿದೆ. ಮತದಾರರ ಪಟ್ಟಿಗೆ ನಕಲಿ ಹೆಸರು ಸೇರಿಸುತ್ತಿರುವ ಕೆಲಸದ ಬಗ್ಗೆ ಎಚ್ಚರ ವಹಿಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.

'ಹಿಂದುತ್ವ ಎಂಬುದು  ಜಾತಿಯಲ್ಲ, ಅದೊಂದು ವಿಶ್ವದಲ್ಲೇ ಅತ್ಯುತ್ತಮವಾದ ಜೀವನ ಪದ್ದತಿ. ಸಿದ್ದರಾಮಯ್ಯ ನಾನೂ ಹಿಂದೂ ಎಂದು ಹೇಳಿಕೊಂಡಿದ್ದಾರೆ. ಹಿಂದೂ ಎಂದೂ ಗೋಮಾಂಸ ತಿನ್ನುವುದಿಲ್ಲ. ಗೋಹತ್ಯೆ ನಿಷೇಧಿಸಿ ಬಿಜೆಪಿ ಸರ್ಕಾರ ತಂದಿದ್ದ ಮಸೂದೆಯನ್ನು, ಹಿಂದೂ ಎನ್ನುವ ಸಿದ್ದರಾಮಯ್ಯ ವಾಪಸ್ ಪಡೆದಿದ್ದೇಕೆ' ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರಶ್ನಿಸಿದರು.

ಸಚಿವರಾದ ಜಾವಡೇಕರ್, ಸದಾನಂದಗೌಡ ಸೇರಿ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದ ಯೋಗಿ:

ಬಿಜೆಪಿ ಪರಿವರ್ತನಾ ಯಾತ್ರೆ ಸಮಾವೇಶ ಕಾರ್ಯಕ್ರಮಕ್ಕೂ ಮುನ್ನ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕುಂಬಳ ಗೋಡಿನಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಚುಂಚನಗಿರಿ ಪೀಠದ ನಿರ್ಮಲಾನಂದನಾಥ ಸ್ವಾಮೀಜಿ ಅವರ ಜತೆ ಸಮಾಲೋಚನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry