ಶ್ರೀದೇವಿಯಿಂದ ಸೋನಂ ಕಲಾಕೃತಿ

7

ಶ್ರೀದೇವಿಯಿಂದ ಸೋನಂ ಕಲಾಕೃತಿ

Published:
Updated:
ಶ್ರೀದೇವಿಯಿಂದ ಸೋನಂ ಕಲಾಕೃತಿ

ತೆರೆಯ ಮೇಲೆ ಸೌಂದರ್ಯ ಹಾಗೂ ಮನಮುಟ್ಟುವ ಅಭಿನಯದ ಮೂಲಕ ಅಭಿಮಾನಿಗಳನ್ನು ಗಳಿಸಿದವರು ಬಾಲಿವುಡ್‌ ನಟಿ ಸೋನಂ ಕಪೂರ್‌. ಬಾಲಿವುಡ್‌ನ ಖ್ಯಾತ ನಟಿ ಶ್ರೀದೇವಿ ಕಪೂರ್‌ ಅವರು ಸೋನಂಳ ಈ ಸೌಂದರ್ಯವನ್ನು ಬಣ್ಣದ ಕುಂಚಗಳಿಂದ ಸೆರೆಹಿಡಿದಿರುವ ಕಲಾಕೃತಿಯೊಂದು ದುಬೈನಲ್ಲಿ ನಡೆಯಲಿರುವ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾಗಲಿದೆ.

‘ಸಾವರಿಯಾ’ ಚಿತ್ರದ ದೃಶ್ಯದಲ್ಲಿ ಸೋನಂಳ ಚಿತ್ರವನ್ನು ಶ್ರೀದೇವಿ ಬಿಡಿಸಿದ್ದರು. ಶ್ರೀದೇವಿ ಈ ಹಿಂದೆ ಮೈಕಲ್‌ ಜಾನ್ಸನ್‌ ಚಿತ್ರವನ್ನೂ ಬಿಡಿಸಿದ್ದರು. ಈಗ ಈ ಎರಡೂ ಚಿತ್ರಗಳು ಹರಾಜಿನಲ್ಲಿ ಮಾರಾಟವಾಗಲಿದೆ. ಸೋನಂ ಚಿತ್ರದ ಬೆಲೆ ₹ 10 ಲಕ್ಷದಿಂದ ಆರಂಭ.

‘ಶ್ರೀದೇವಿ ಅನೇಕ ವರ್ಷಗಳಿಂದ ಚಿತ್ರಗಳನ್ನು ಬಿಡಿಸುತ್ತಿದ್ದಾರೆ. ಇದು ಅವರ ನೆಚ್ಚಿನ ಹವ್ಯಾಸ. 2010ರಲ್ಲೇ ಇಂಟರ್‌ನ್ಯಾಷನಲ್‌ ಆರ್ಟ್‌ ಹೌಸ್‌ ಅವರ ಕಲಾಕೃತಿ ಹರಾಜಿಗೆ ಕೇಳಿತ್ತು. ಆದರೆ ಶ್ರೀದೇವಿ ಒಪ್ಪಿರಲಿಲ್ಲ. ಈಗ ಘನ ಉದ್ದೇಶಕ್ಕಾಗಿ ದುಬೈನಲ್ಲಿ ನಡೆಯುವ ಹರಾಜಿನಲ್ಲಿ ಕಲಾಕೃತಿ ಮಾರಾಟ ಮಾಡುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry