ಹಲ್ವಿದಾರ್‌ ಇಶಾರ್‌ ಸಿಂಗ್‌ ಪಾತ್ರದಲ್ಲಿ ಅಕ್ಷಯ್‌

7

ಹಲ್ವಿದಾರ್‌ ಇಶಾರ್‌ ಸಿಂಗ್‌ ಪಾತ್ರದಲ್ಲಿ ಅಕ್ಷಯ್‌

Published:
Updated:
ಹಲ್ವಿದಾರ್‌ ಇಶಾರ್‌ ಸಿಂಗ್‌ ಪಾತ್ರದಲ್ಲಿ ಅಕ್ಷಯ್‌

ಸಿಖ್ಖರ ಧರ್ಮಗುರು ಗುರು ಗೋವಿಂದ ಸಿಂಗ್‌ ಅವರ 351ನೇ ಹುಟ್ಟುಹಬ್ಬದ ದಿನದಂದೇ ಅಕ್ಷಯ್‌ಕುಮಾರ್‌ ನಟನೆಯ ‘ಕೇಸರಿ’ ಸಿನಿಮಾದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ‘ಕೇಸರಿ’ ಸಿನಿಮಾದಲ್ಲಿ ಅಕ್ಷಯ್‌ ಸಿಖ್‌ ಮುಖಂಡ ಹಲ್ವಿದಾರ್‌ ಇಶಾರ್‌ ಸಿಂಗ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಫಸ್ಟ್‌ಲುಕ್‌ ಪೋಸ್ಟರ್‌ನಲ್ಲಿ ‘ಕಿಲಾಡಿ’ ನಟ ಅಕ್ಷಯ್‌ಕುಮಾರ್‌ ಅವರನ್ನು ಗುರುತಿಸಲು ಅಸಾಧ್ಯವಾಗಿದ್ದು, ತಲೆ ಮೇಲೆ ದಪ್ಪವಾದ ರುಮಾಲು, ಉದ್ದನೆ ಇಳಿಬಿಟ್ಟಿರುವ ಗಡ್ಡದಲ್ಲಿ ಸಾಂಪ್ರದಾಯಿಕ ಸಿಖ್ಖರ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ.

‘ಅಕ್ಷಯ್‌ ಕುಮಾರ್‌ ಅವರು ಹಲ್ವಿದಾರ್‌ ಇಶಾರ್‌ ಸಿಂಗ್‌ ಪಾತ್ರಕ್ಕೆ ಸರಿಯಾದ ಆಯ್ಕೆ’ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 1897ರಲ್ಲಿ ನಡೆದ ಸಾಗರಘಿ ಯುದ್ಧದ ಕತೆಯನ್ನು ಈ ಚಿತ್ರ ಒಳಗೊಂಡಿದ್ದು, ಈ ಯುದ್ಧದಲ್ಲಿ 10,000ಕ್ಕೂ ಹೆಚ್ಚು ಆಪ್ಘನ್‌ ಸೈನಿಕರ ವಿರುದ್ಧ ಕೇವಲ 21 ಸಿಖ್ಖರು ಹೋರಾಡಿದ್ದರು. ಯುದ್ಧದ ನಾಯಕ ಹಲ್ವಿದಾರ್‌ ಇಶಾರ್‌ ಸಿಂಗ್‌ ಯುದ್ಧದಲ್ಲಿ ಮಡಿದಿದ್ದರು.

ಈ ಚಿತ್ರದ ನಾಯಕಿ ಪರಿಣಿತಿ ಚೋಪ್ರಾ. ಹಾಲಿವುಡ್‌ನ ಕಾಲ್ಪನಿಕ ಚಿತ್ರ ‘ಮ್ಯಾಡ್‌ಮ್ಯಾಕ್ಸ್‌: ಫುರಿರೋಡ್‌’ ಚಿತ್ರದ ಸ್ಟಂಟ್‌ ಮಾಸ್ಟರ್‌ ಲಾರೆನ್ಸ್‌ ವುಡ್‌ವಾರ್ಡ್‌ ಈ ಚಿತ್ರಕ್ಕೂ ಸ್ಟಂಟ್‌ ಮಾಡುತ್ತಿದ್ದು, ಹೀಗಾಗಿ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry