ಶನಿವಾರ, ಜೂಲೈ 11, 2020
28 °C

ವಿ.ವಿ ಉದಾಸೀನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ತಡವಾಗಿ ಅಂದರೆ ಜನವರಿ 1ರಿಂದ ಆರಂಭವಾಗಿದೆ. ಮುಷ್ಕರದ ಬಿಸಿಯೂ ತಟ್ಟಿದೆ. ಅರ್ಧದಷ್ಟೂ ಬೋಧಕರು ಹಾಜರಾಗಿಲ್ಲ. ಈ ಗೈರುಹಾಜರಿಗೆ ಆಯಾ ಕಾಲೇಜಿನ ಪ್ರಾಂಶುಪಾಲರನ್ನೇ ನೇರ ಹೊಣೆ ಮಾಡಬೇಕು.

ಆದರೆ ಕ್ರಮ ತೆಗೆದುಕೊಳ್ಳಬೇಕಾದ ವಿಶ್ವವಿದ್ಯಾಲಯಕ್ಕೆ ಮತ್ತು ಕಾಲೇಜು ಶಿಕ್ಷಣ ಇಲಾಖೆಗೆ ಇಚ್ಛಾಶಕ್ತಿಯ ಹಾಗೂ ಮಾಹಿತಿಯ ಕೊರತೆ ಇದೆ. ಈ ಹಿಂದೆ ಮೌಲ್ಯಮಾಪನಕ್ಕೆ ಗೈರುಹಾಜರಾದವರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಯಾವ ಉಪನ್ಯಾಸಕರನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂಬುದರ ಬಗ್ಗೆ ವಿಶ್ವವಿದ್ಯಾಲಯ ಬಳಿ ಮಾಹಿತಿಯೇ ಇಲ್ಲ. ‘ಮೌಲ್ಯಮಾಪನದಲ್ಲಿ ಭಾಗವಹಿಸಿದ್ದಾರೆ’ ಎಂಬ ಪತ್ರವಿಲ್ಲದೆ ವೇತನ ಬಿಡುಗಡೆ ಮಾಡಲಾಗುತ್ತಿದೆ. ಅನೇಕ ಬೋಧಕರು ಹೆಚ್ಚುವರಿ ರಜೆಯಲ್ಲಿ ಮುಳುಗಿದ್ದಾರೆ.ಜನವರಿ 10 ರಿಂದ ಕಾಲೇಜುಗಳು ಪುನಃ ಆರಂಭಗೊಳ್ಳ ಬೇಕಿದೆ. ಅದು ಖಂಡಿತ ಸಾಧ್ಯವಾಗುವುದಿಲ್ಲ. ಸೆಮಿಸ್ಟರ್‌ ಮಧ್ಯೆ ಚುನಾವಣೆ ಬರಲಿದೆ. ವಿದ್ಯಾರ್ಥಿಗಳಿಗೆ ತೊಂದರೆ ಯಾಗಲಿದೆ. ಅಧಿಕಾರಿಗಳ ಉದಾಸೀನ ಮತ್ತು ಕಣ್ಣಾಮುಚ್ಚಾಲೆಗೆ ವಿದ್ಯಾರ್ಥಿಗಳು ಬಲಿಪಶುಗಳಾಗುತ್ತಿದ್ದಾರೆ. ಸಣ್ಣಪುಟ್ಟ ತಪ್ಪಿಗೆ, ವಿಳಂಬಕ್ಕೆ ವಿದ್ಯಾರ್ಥಿಗಳಿಂದ ಸಾವಿರಗಟ್ಟಲೆ ದಂಡ ಪೀಕಿಸುವ ವಿಶ್ವವಿದ್ಯಾಲಯವು ಫಲಿತಾಂಶ ವಿಳಂಬಕ್ಕೆ ದಂಡ ಪಾವತಿ ಮಾಡುತ್ತದೆಯೇ? ನಾಚಿಕೆಯಾಗಬೇಡವೇ? ಬೋಧಕರ ಸಂಘಗಳು, ಶಿಕ್ಷಣ ಕ್ಷೇತ್ರದ ರಾಜಕೀಯ ಪ್ರತಿನಿಧಿಗಳು ಇತ್ತ ಗಮನಹರಿಸಬೇಡವೇ?

–ಚಂದ್ರಶೇಖರ್‌ ಸಿ., ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.