‘ಆಪ್‌’ ಮುಖಂಡ ಅಶುತೋಷ್‌ಗೆ ₹10ಸಾವಿರ ದಂಡ

7

‘ಆಪ್‌’ ಮುಖಂಡ ಅಶುತೋಷ್‌ಗೆ ₹10ಸಾವಿರ ದಂಡ

Published:
Updated:
‘ಆಪ್‌’ ಮುಖಂಡ ಅಶುತೋಷ್‌ಗೆ ₹10ಸಾವಿರ ದಂಡ

ನವದೆಹಲಿ: ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ದಾಖಲಿಸಿರುವ ಮಾನಹಾನಿ ಪ್ರಕರಣದಲ್ಲಿ ವಿಚಾರಣೆಯ ಹಾದಿ ತಪ್ಪಿಸಲು ಪ್ರಯತ್ನಿಸಿದ ಕಾರಣಕ್ಕೆ ಆಮ್ ಆದ್ಮಿ ಪಕ್ಷದ ಮುಖಂಡ ಅಶುತೋಷ್‌ ಅವರಿಗೆ ದೆಹಲಿಯ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ₹ 10ಸಾವಿರ ದಂಡ ವಿಧಿಸಿದೆ.

ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್‌ ಸಂಸ್ಥೆಯಲ್ಲಿ (ಡಿಡಿಸಿಎ) ಜೇಟ್ಲಿ ಅವರು ಭ್ರಷ್ಟಾಚಾರ ಎಸಗಿರುವುದಾಗಿ ಅಶುತೋಷ್‌ ಹಾಗೂ ‘ಆಪ್‌’ನ ಇತರ ಮುಖಂಡರು ಹೇಳಿಕೆ ನೀಡಿದ್ದರು. ಈ ಸಂಬಂಧ ಜೇಟ್ಲಿ, ಕೋರ್ಟ್‌ನಲ್ಲಿ 2015ರಲ್ಲಿ ಮಾನಹಾನಿ ಮೊಕದ್ದಮೆ ದಾಖಲಿಸಿದ್ದಾರೆ. ಈ ಅರ್ಜಿಯನ್ನು ಹಿಂದಿಯಲ್ಲಿ ತರ್ಜುಮೆ ಮಾಡುವಂತೆ ಜೇಟ್ಲಿ ಅವರಿಗೆ ಆದೇಶಿಸಬೇಕು ಎಂದು ಅಶುತೋಷ್‌ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಈ ಮನವಿಯನ್ನು ವಜಾ ಮಾಡಿರುವ ಕೋರ್ಟ್‌, ‘ಅರ್ಜಿದಾರರಿಗಾಗಲೀ (ಅಶುತೋಷ್‌) ಅಥವಾ ಅವರ ಪರ ವಕೀಲರಿಗಾಗಲೀ ಇಂಗ್ಲಿಷ್‌ ಬಾರದ ಭಾಷೆಯೇನಲ್ಲ. ವಿನಾಕಾರಣ, ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಲು ಈ ಅರ್ಜಿ ಸಲ್ಲಿಸಲಾಗಿದೆ’ ಎಂದು ದಂಡ ವಿಧಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry