ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯ ಕಾಲೇಜುಗಳಲ್ಲಿ ಸ್ಥಳೀಯ ವೈದ್ಯರ ಬೋಧನೆಗೆ ಶಿಫಾರಸು

ಪ್ರಾಧ್ಯಾಪಕರ ಕೊರತೆ ಪರಿಹರಿಸಲು ಸಮಿತಿಯ ಸಲಹೆ
Last Updated 7 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ವೈದ್ಯಕೀಯ ಕಾಲೇಜು ಗಳಲ್ಲಿ ಪ್ರಾಧ್ಯಾಪಕರ ಕೊರತೆ ಭಾರಿ ಪ್ರಮಾಣದಲ್ಲಿದೆ. ಹಾಗಾಗಿ ಸ್ಥಳೀಯ ‘ಖ್ಯಾತ ವೈದ್ಯರು’ ಇಲ್ಲಿ ಬೋಧಿಸಲು ಅವಕಾಶ ಕಲ್ಪಿಸಬೇಕು ಎಂದು ಸಂಸತ್ತಿನ ಅಂದಾಜು ಸಮಿತಿಯು ಸಲಹೆ ಮಾಡಿದೆ.

ವೈದ್ಯಕೀಯ ಕಾಲೇಜುಗಳ ಪ್ರಾಧ್ಯಾಪಕರ ನೇಮಕ ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ದೇಶದಲ್ಲಿ ಪ್ರಾಧ್ಯಾಪಕರ ಕೊರತೆ ಎಷ್ಟು ಎಂಬುದರ ನಿಖರ ಮಾಹಿತಿ ಇಲ್ಲ. ಆದರೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಏಮ್ಸ್‌) ಪ್ರಾಧ್ಯಾಪಕರ ಕೊರತೆಯ ಅಂಕಿ ಅಂಶ ದೇಶದ ಇತರ ವೈದ್ಯಕೀಯ ಕಾಲೇಜುಗಳಲ್ಲಿನ ಕೊರತೆ ಬಗ್ಗೆ ಒಂದು ಅಂದಾಜನ್ನು ನೀಡುತ್ತದೆ.

2016ರ ಏಪ್ರಿಲ್‌ನ ಮಾಹಿತಿ ಪ್ರಕಾರ, ಏಮ್ಸ್‌ನಲ್ಲಿ 232 ಬೋಧಕ ಹುದ್ದೆಗಳು ಖಾಲಿ ಇವೆ. ಇದರಲ್ಲಿ 66 ಪ್ರಾಧ್ಯಾಪಕರು, 10 ಹೆಚ್ಚುವರಿ ಪ್ರಾಧ್ಯಾಪಕರು, 23 ಸಹ ಪ್ರಾಧ್ಯಾಪಕರು ಮತ್ತು 131 ಸಹ ಪ್ರಾಧ್ಯಾಪಕರ ಹುದ್ದೆಗಳು ಸೇರಿವೆ.

‘ಸಂಶೋಧನೆಯ ಹಿನ್ನೆಲೆ ಇರುವ ಖ್ಯಾತ ಪರಿಣತ ವೈದ್ಯರಿಗೆ ಸಂದರ್ಶಕ ಪ್ರಾಧ್ಯಾಪಕ ಸ್ಥಾನಗಳನ್ನು ನೀಡಬಹುದು. ಅವರು ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರಪದವಿ ಕೋರ್ಸ್‌ಗಳಿಗೆ ಪಾಠ ಮಾಡಬಹುದು. ವೈದ್ಯಕೀಯ ಕಾಲೇಜು ಇರುವ ನಗರಗಳ ಖ್ಯಾತ ವೈದ್ಯರಿಂದ ಪಾಠ ಹೇಳಿಸಿಕೊಳ್ಳುವುದನ್ನು ವಿದ್ಯಾರ್ಥಿಗಳೂ ಇಷ್ಟ ಪಡುತ್ತಾರೆ. ಸ್ಥಳೀಯ ಖ್ಯಾತ ವೈದ್ಯರು ಸಂದರ್ಶಕ ಪ್ರಾಧ್ಯಾಪಕರಾಗುವುದರಿಂದ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಬೋಧಕರ ಬಳಗವೇ ಸೃಷ್ಟಿಯಾಗುತ್ತದೆ’ ಎಂದು ಸಂಸತ್ತಿನಲ್ಲಿ ಮಂಡಿಸಲಾದ ವರದಿಯಲ್ಲಿ ಹೇಳಲಾಗಿದೆ.

ಭಾರತೀಯ ವೈದ್ಯಕೀಯ ಮಂಡಳಿ ಗೂ ಇಂತಹ ಪ್ರಸ್ತಾವವೊಂದು ಸಲ್ಲಿಕೆಯಾಗಿದೆ. ಆದರೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. 75 ವರ್ಷದ ವರೆಗೆ ಬೋಧನೆಗೆ ಅವಕಾಶ ಕೊಡಬೇಕು ಎಂಬ ಬೇಡಿಕೆಯ ಬಗ್ಗೆಯೂ ನಿರ್ಧಾರಕ್ಕೆ ಬರಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT