ಭಾರತ ತಂಡಕ್ಕೆ ಮರಳುವ ವಿಶ್ವಾಸದಲ್ಲಿ ಅದಿತಿ

7

ಭಾರತ ತಂಡಕ್ಕೆ ಮರಳುವ ವಿಶ್ವಾಸದಲ್ಲಿ ಅದಿತಿ

Published:
Updated:

ಜಮ್ಮು: ಗೋಲ್‌ಕೀಪರ್ ಅದಿತಿ ಚೌಹಾಣ್ ಈ ವರ್ಷದ ಏಷ್ಯನ್‌ ಕ್ರೀಡಾಕೂಟದ ವೇಳೆಗೆ ಭಾರತ ಫುಟ್‌ಬಾಲ್‌ ತಂಡಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.

‘ಜಕಾರ್ತದಲ್ಲಿ ಆಗಸ್ಟ್‌ನಲ್ಲಿ ನಡೆಯುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ವಿಶ್ವಾಸವಿದೆ. ಗಾಯದ ಸಮಸ್ಯೆಯಿಂದ ಹೊರಬಂದಿರುವುದರಿಂದ ಭರವಸೆ ಮೂಡಿದೆ’ ಎಂದು ಅದಿತಿ ಹೇಳಿದ್ದಾರೆ.

2015ರಿಂದ ಎರಡು ವರ್ಷದ ಅವಧಿಗೆ ಅವರು ಇಂಗ್ಲೆಂಡ್‌ನ ವೆಸ್ಟ್‌ ಹ್ಯಾಮ್ ಯುನೈಟೆಡ್ ಲೇಡಿಸ್ ಫುಟ್‌ಬಾಲ್‌ ಕ್ಲಬ್‌ನಲ್ಲಿ ಆಡಿದ್ದ ಅವರು ಈ ಕ್ಲಬ್‌ನಲ್ಲಿ ಆಡಿದ ಭಾರತದ ಏಕೈಕ ಆಟಗಾರ್ತಿ ಎನಿಸಿದ್ದಾರೆ.

‘ಹಿಂದಿನ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಭಾರತ, ಚೀನಾ ಹಾಗೂ ಕೊರಿಯಾ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದವು. ರ‍್ಯಾಂಕಿಂಗ್ ಅಗ್ರ ಸ್ಥಾನದಲ್ಲಿದ್ದ ತಂಡಗಳು ಟೂರ್ನಿಯ ಆರಂಭದಲ್ಲಿಯೇ ಎದುರಾಗಿದ್ದರಿಂದ ಭಾರತಕ್ಕೆ ಜಯ ಸಾಧ್ಯವಾಗಲಿಲ್ಲ’ ಎಂದು ಅದಿತಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry