ಕೊಕ್ಕೊ: ಧಾರವಾಡ ತಂಡ ಚಾಂಪಿಯನ್

7

ಕೊಕ್ಕೊ: ಧಾರವಾಡ ತಂಡ ಚಾಂಪಿಯನ್

Published:
Updated:
ಕೊಕ್ಕೊ: ಧಾರವಾಡ ತಂಡ ಚಾಂಪಿಯನ್

ಧಾರವಾಡ: ಇಲ್ಲಿನ ಕರ್ನಾಟಕ ವಿಜ್ಞಾನ ಕಾಲೇಜ್ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಆಹ್ವಾನಿತ ಹೊನಲು ಬೆಳಕಿನ ಪುರುಷರ ಕೊಕ್ಕೊ ಟೂರ್ನಿಯಲ್ಲಿ ಧಾರವಾಡ ತಂಡ ಚಾಂಪಿಯನ್‌ ಆಗಿದೆ.

ಭಾನುವಾರ ಸಂಜೆ ನಡೆದ ಫೈನಲ್‌ನಲ್ಲಿ ಹಾವೇರಿ ಜಿಲ್ಲೆ ರಟ್ಟಿಹಳ್ಳಿಯ ಕ್ರೀಡಾ ಸಂಘ ತಂಡವನ್ನು 16–11ರಲ್ಲಿ ಧಾರವಾಡ ತಂಡ ಮಣಿಸಿತು. ಅಮರ ಸ್ಪೋರ್ಟ್ಸ್ ಕ್ಲಬ್ ಮೂರನೇ ಸ್ಥಾನ ಪಡೆಯಿತು. ಸೆಮಿಫೈನಲ್‌ ಪಂದ್ಯಗಳಲ್ಲಿ ಬಾಗಲಕೋಟೆ ಜಿಲ್ಲೆ ಅಮರಾವತಿಯ ಅಮರ ಸ್ಪೋರ್ಟ್ಸ್ ಕ್ಲಬ್ ವಿರುದ್ಧ ಸೆಣಸಿದ ಧಾರವಾಡ ತಂಡ 1 ಅಂಕದಿಂದ (14-13) ಜಯಗಳಿಸಿ ಫೈನಲ್‌ಗೆ ತಲುಪಿತ್ತು.

ಬೆಳಗಾವಿ ಜಿಲ್ಲೆ ಪರಮಾನಂದವಾಡಿಯ ಬಸವ ಸ್ಪೋರ್ಟ್ಸ್ ಕ್ಲಬ್ ವಿರುದ್ಧ ಹಾವೇರಿ ತಂಡ 1 ಅಂಕ (9-8) ಅಂತರದಿಂದ ಜಯ ಪಡೆದು ಪ್ರಶಸ್ತಿ ಸುತ್ತು ತಲುಪಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry