ಸ್ವಪ್ನಿಲ್‌ ಯಳವೆ ಶತಕ

7

ಸ್ವಪ್ನಿಲ್‌ ಯಳವೆ ಶತಕ

Published:
Updated:

ಹುಬ್ಬಳ್ಳಿ: ಆರಂಭಿಕ ಬ್ಯಾಟ್ಸ್‌ಮನ್‌ ಸ್ವಪ್ನಿಲ್‌ ಯಳವೆ (103; 59 ಎ, 9 ಬೌಂ, 5 ಸಿ) ಗಳಿಸಿದ ಶತಕದ ನೆರವಿನಿಂದ ಹುಬ್ಬಳ್ಳಿ ನೈಟ್ಸ್ ತಂಡ ಹುಬ್ಬಳ್ಳಿ ಪ್ರೀಮಿಯರ್‌ ಲೀಗ್ (ಎಚ್‌ಪಿಎಲ್‌) ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಶಿರಸಿಯ ಟಿ.ಎಸ್‌.ಎಸ್‌. ಟೈಗರ್ಸ್ ಎದುರು 81 ರನ್‌ಗಳ ಜಯ ಗಳಿಸಿತು.

ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿ ನೈಟ್ಸ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 206 ರನ್‌ ಗಳಿಸಿತು. ಶಿರಸಿಯ ತಂಡ 125 ರನ್ ಕಲೆ ಹಾಕಿ ಹೋರಾಟ ಮಗಿಸಿತು.

ದಿನದ ಇನ್ನೊಂದು ಪಂದ್ಯದಲ್ಲಿ ಎನ್‌.ಕೆ. ವಾರಿಯರ್ಸ್ ತಂಡದ ಎದುರು ಹುಬ್ಬಳ್ಳಿ ಟೈಗರ್ಸ್ ತಂಡ ನಾಲ್ಕು ವಿಕೆಟ್‌ಗಳ ಸುಲಭ ಗೆಲುವು ಪಡೆಯಿತು. ವಾರಿಯರ್ಸ್‌ ತಂಡ ನೀಡಿದ್ದ 118 ರನ್ ಗುರಿಯನ್ನು ಟೈಗರ್ಸ್‌ 18.2 ಓವರ್‌ಗಳಲ್ಲಿ ಮುಟ್ಟಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry