ಮೇರಿಲ್ಯಾಂಡ್‌ನಿಂದ ಅರುಣಾ ಮಿಲ್ಲರ್ ಸ್ಪರ್ಧೆ

7

ಮೇರಿಲ್ಯಾಂಡ್‌ನಿಂದ ಅರುಣಾ ಮಿಲ್ಲರ್ ಸ್ಪರ್ಧೆ

Published:
Updated:
ಮೇರಿಲ್ಯಾಂಡ್‌ನಿಂದ ಅರುಣಾ ಮಿಲ್ಲರ್ ಸ್ಪರ್ಧೆ

ವಾಷಿಂಗ್ಟನ್ : ಭಾರತೀಯ ಸಂಜಾತೆ ಅರುಣಾ ಮಿಲ್ಲರ್ (53) ಅವರು ಮೇರಿಲ್ಯಾಂಡ್ ಕ್ಷೇತ್ರದಿಂದ ಅಮೆರಿಕ ಸಂಸತ್ತಿಗೆ ಸ್ಪರ್ಧಿಸುತ್ತಿದ್ದು, ತಮ್ಮ ನಾಮಪತ್ರ ಸಲ್ಲಿಸಿದರು. ಈ ವೇಳೆ ತಾಯಿ ಹೇಮಾ ಕಾಟ್ರಗಡ್ಡಾ ಅವರು ಜೊತೆಗಿದ್ದರು. ಅರುಣಾ, ಸದ್ಯ ಮೇರಿಲ್ಯಾಂಡ್ ರಾಜ್ಯದ ಕೆಳಮನೆಯ (ಹೌಸ್ ಆಫ್ ಡೆಲಿಗೇಟ್ಸ್)  ಸದಸ್ಯರಾಗಿದ್ದಾರೆ.

ಈಗ ಡೆಮಾಕ್ರಟಿಕ್ ಪಕ್ಷದ ಸಂಸದರಾಗಿರುವ ಜಾನ್ ಡೆಲಾನಿ ಅವರು ಈ ಬಾರಿ ಸ್ಪರ್ಧಿಸುತ್ತಿಲ್ಲ. 2020ರ ಅಮೆರಿಕ ಚುನಾವಣೆಯಲ್ಲಿ ಪಕ್ಷದ ಅಧ್ಯಕೀಯ ಅಭ್ಯರ್ಥಿಯಾಗುವುದಾಗಿ ಅವರು ಈಗಾಗಲೇ ಘೋಷಿಸಿದ್ದಾರೆ.

ನಾಮಪತ್ರ ಸಲ್ಲಿಸಿದ ಅರುಣಾ, ‘ಇದು ನನ್ನ ಜೀವನದ ಅತ್ಯಂತ ಸಂತೋಷದ ಹಾಗೂ ಹೆಮ್ಮೆಯ ದಿನ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

‘ಒಬ್ಬ ವಲಸಿಗಳಾಗಿ ಇಲ್ಲಿ ನನಗೆ ಅದ್ಭುತವಾದ ಅವಕಾಶಗಳು ಸಿಕ್ಕಿವೆ. ನಮ್ಮ ಎಲ್ಲ ಜನರಿಗೂ ಅವಕಾಶದ ಬಾಗಿಲನ್ನು ನಾವು ತೆರೆದಿಡಬೇಕಿದೆ. ಸಂದಿಗ್ಧ ಸಮಯದಲ್ಲಿ ಸಂಸತ್ತಿಗೆ ಅನುಭವಿ, ಪ್ರಗತಿಪರ ಸಂಸದರ ಅಗತ್ಯವಿದೆ. ದೇಶ ಮತ್ತು ಜನರ ಹಿತಾಸಕ್ತಿಗೆ ನೆರವಾಗಬಲ್ಲ ನೀತಿಗಳನ್ನು ರೂಪಿಸಬೇಕಿದೆ’ ಎಂದು ಅರುಣಾ ಹೇಳಿದ್ದಾರೆ. ಅರುಣಾ ಅವರು ಮೇರಿಲ್ಯಾಂಡ್‌ನ ಸಕ್ರಿಯ ಜನಪ್ರತಿನಿಧಿ ಎಂದು ಕರೆಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry