ಬಾಂಗ್ಲಾ ತಂಡದಿಂದ ಹೊರಬಿದ್ದ ಟಸ್ಕಿನ್‌

7

ಬಾಂಗ್ಲಾ ತಂಡದಿಂದ ಹೊರಬಿದ್ದ ಟಸ್ಕಿನ್‌

Published:
Updated:

ಢಾಕಾ (ಎಎಫ್‌ಪಿ): ಆರಂಭಿಕ ಬ್ಯಾಟ್ಸ್‌ಮನ್ ಸೌಮ್ಯ ಸರ್ಕಾರ್ ಮತ್ತು ಬೌಲರ್‌ ಟಸ್ಕಿನ್ ಅಹಮ್ಮದ್ ಅವರನ್ನು ತ್ರಿಕೋನ ಏಕದಿನ ಸರಣಿಗಾಗಿ ಪ್ರಕಟಗೊಂಡ ಬಾಂಗ್ಲಾದೇಶ ತಂಡದಿಂದ ಕೈಬಿಡಲಾಗಿದೆ.

ಜನವರಿ 15ರಿಂದ ತ್ರಿಕೋನ ಏಕದಿನ ಸರಣಿ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಜಿಂಬಾಬ್ವೆ ವಿರುದ್ಧ ಆಡಲಿದೆ. ಶ್ರೀಲಂಕಾ ಕೂಡ ಈ ಸರಣಿಯಲ್ಲಿ ಆಡಲಿದೆ. ಮೊದಲ ಪಂದ್ಯ ಢಾಕಾದಲ್ಲಿ ಆಯೋಜನೆಗೊಂಡಿದೆ.

ಕಳಪೆ ಫಾರ್ಮ್‌ ಕಾರಣದಿಂದ ಸೌಮ್ಯ ಸರ್ಕಾರ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಯಲ್ಲಿ ಸರ್ಕಾರ್ ಒಂದು ಏಕದಿನ ಪಂದ್ಯ ಮಾತ್ರ ಆಡಿದ್ದರು. ಕೇವಲ ಎಂಟು ರನ್ ಗಳಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry