ಆನ್‌ಲೈನ್‌ ವಹಿವಾಟು ಹೆಚ್ಚಳ ನಿರ್ಧಾರ

7
8 ಇ–ಕಾಮರ್ಸ್‌ ಸಂಸ್ಥೆ ಜತೆ ಶೀಘ್ರವೇ ಪತಂಜಲಿ ಒಪ್ಪಂದ

ಆನ್‌ಲೈನ್‌ ವಹಿವಾಟು ಹೆಚ್ಚಳ ನಿರ್ಧಾರ

Published:
Updated:
ಆನ್‌ಲೈನ್‌ ವಹಿವಾಟು ಹೆಚ್ಚಳ ನಿರ್ಧಾರ

ನವದೆಹಲಿ: ಅಂತರ್ಜಾಲ ತಾಣದಲ್ಲಿ ತನ್ನ ಉತ್ಪನ್ನಗಳ ಮಾರಾಟ ಹೆಚ್ಚಿಸಲು ಮುಂದಾಗಿರುವ ಬಾಬಾ ರಾಮದೇವ್‌ ನೇತೃತ್ವದಲ್ಲಿನ ಪತಂಜಲಿ ಆಯುರ್ವೇದವು, 8 ಪ್ರಮುಖ ಇ–ಕಾಮರ್ಸ್‌ ಸಂಸ್ಥೆಗಳ ಜತೆ ಒಪ್ಪಂದಕ್ಕೆ ಬರಲು ಮುಂದಾಗಿದೆ.

ತನ್ನ ಸ್ವದೇಶಿ ಶ್ರೇಣಿಯ ತ್ವರಿತವಾಗಿ ಬಿಕರಿಯಾಗುವ ಗ್ರಾಹಕರ ಉತ್ಪನ್ನಗಳ (ಎಫ್‌ಎಂಸಿಜಿ) ಆನ್‌ಲೈನ್‌ ಮಾರಾಟ ಉತ್ತೇಜಿಸಲು ಇ–ಕಾಮರ್ಸ್‌ ಸಂಸ್ಥೆ

ಗಳಾದ ಫ್ಲಿಪ್‌ಕಾರ್ಟ್‌, ಅಮೆಜಾನ್‌, ಪೇಟಿಎಂ ಮಾಲ್‌, 1ಎಂಜಿ, ಬಿಗ್‌ ಬಾಸ್ಕೆಟ್‌, ಗ್ರೋಫರ್ಸ್‌, ಶಾಪ್‌ಕ್ಲೂಸ್‌ ಮತ್ತು ಸ್ನ್ಯಾಪ್‌ಡೀಲ್‌  ಜತೆ ಶೀಘ್ರದಲ್ಲಿಯೇ ಒಪ್ಪಂದ ಮಾಡಿಕೊಳ್ಳಲಿದೆ.

ಇದೇ 16ರಂದು ನಡೆಯಲಿರುವ ಸಮಾರಂಭದಲ್ಲಿ  ಈ ಸಂಸ್ಥೆಗಳ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಬಾಬಾ ರಾಮದೇವ್‌ ಮತ್ತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರೂ ಪಾಲ್ಗೊಳ್ಳಲಿದ್ದಾರೆ.

‘ಆನ್‌ಲೈನ್‌ನಲ್ಲಿ ನಮ್ಮ ಉತ್ಪನ್ನಗಳ ಮಾರಾಟವನ್ನು ದೊಡ್ಡ ಪ್ರಮಾಣದಲ್ಲಿ ಆರಂಭಿಸಲಿದ್ದೇವೆ. ಈಗಾಗಲೇ ಕೆಲ ಸರಕುಗಳು ಈ ತಾಣಗಳಲ್ಲಿ ಇತರ ಮಾರಾಟಗಾರರ ಮೂಲಕ ಲಭ್ಯ ಇವೆ. ಈ ಒಪ್ಪಂದವು ಸಂಸ್ಥೆಯ ಉತ್ಪನ್ನಗಳನ್ನು ಇನ್ನಷ್ಟು ವ್ಯವಸ್ಥಿತವಾಗಿ ಮಾರಾಟ ಮಾಡಲು ಅನುವು ಮಾಡಿಕೊಡಲಿದೆ. ನಮ್ಮೆಲ್ಲ ಉತ್ಪನ್ನಗಳನ್ನು ಅಂತರ್ಜಾಲ ತಾಣದಲ್ಲಿ ಮಾರಾಟ ಮಾಡಲು  ಸಂಘಟಿತ ಮತ್ತು ವ್ಯವಸ್ಥಿತ ಒಪ್ಪಂದಕ್ಕೆ ಬರಲಾಗುತ್ತಿದೆ’ ಎಂದು ಪತಂಜಲಿ ವಕ್ತಾರ ತಿಳಿಸಿದ್ದಾರೆ.

ಸಂಸ್ಥೆಯ ಅಂತರ್ಜಾಲ ತಾಣ ‘ಪತಂಜಲಿಆಯುರ್ವೇದಡಾಟ್‌ಕಾಂ’ (patanjaliayurved.net) ಮಾರಾಟದ ಜತೆಗೆ ಹೆಚ್ಚುವರಿಯಾಗಿ ಈ ಸಂಸ್ಥೆಗಳ ಜತೆಗೆ ಒಪ್ಪಂದಕ್ಕೆ ಬರಲಾಗುತ್ತಿದೆ. ಇದರಿಂದ ‘ಎಫ್‌ಎಂಸಿಜಿ’ ಉತ್ಪನ್ನಗಳ ಮಾರಾಟದ ಸ್ವರೂಪವೇ ಬದಲಾಗಲಿದೆ’ ಎಂದೂ ವಕ್ತಾರ ಅಭಿಪ್ರಾಯಪಟ್ಟಿದ್ದಾರೆ.

2016–17ರಲ್ಲಿ ಸಂಸ್ಥೆಯ ವಾರ್ಷಿಕ ವಹಿವಾಟು ₹ 10,500 ಕೋಟಿಗಳನ್ನು ದಾಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry