ಬದುಕಿಗೆ ಬೇಕು ಸದ್ಗುಣ: ಯೇಸುದಾಸ್

7

ಬದುಕಿಗೆ ಬೇಕು ಸದ್ಗುಣ: ಯೇಸುದಾಸ್

Published:
Updated:
ಬದುಕಿಗೆ ಬೇಕು ಸದ್ಗುಣ: ಯೇಸುದಾಸ್

ಬೆಂಗಳೂರು: ಎಲ್ಲರನ್ನೂ ಗೌರವಿಸುವ ಮತ್ತು ಸಹಾಯ ಮಾಡುವ ಸದ್ಗುಣ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ನೆಮ್ಮದಿಯೂ ಸಿಗುತ್ತದೆ ಎಂದು ಗಾಯಕ ಕೆ.ಜೆ. ಯೇಸುದಾಸ್ ತಿಳಿಸಿದರು.

ರೆವಾ ವಿಶ್ವವಿದ್ಯಾಲಯ ಸಂಸ್ಥಾಪನಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಎಲ್ಲ ಧರ್ಮಗಳನ್ನು ಗೌರವಿಸಬೇಕು. ವಿದ್ಯೆಯನ್ನು ಗೌರವದಿಂದ ಕಲಿತು, ಜೀವನ ಸಾರ್ಥಕಪಡಿಸಿಕೊಳ್ಳಬೇಕು. ನಿಮ್ಮ ಮೇಲೆ ನೀವು ವಿಶ್ವಾಸವಿಡ

ಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

‘ಎಲ್ಲರಲ್ಲೂ ಒಂದಲ್ಲ ಒಂದು ವಿಶೇಷ ಇರುತ್ತದೆ. ಆ ವಿಶೇಷತೆಯನ್ನು ನೀವು ಪ್ರಸ್ತುತಪಡಿಸುವಂತೆ ಜಗತ್ತು ಕಾತರದಿಂದ ಕಾಯುತ್ತಿದೆ’ ಎಂದು ನಟ ರಮೇಶ್‌ ತಿಳಿಸಿದರು.

ಕುಲಪತಿ ಡಾ. ಪಿ.ಶ್ಯಾಮರಾಜು, ‘ರೆವಾ ವಿಶ್ವವಿದ್ಯಾಲಯ ಮಾದರಿ

ಯಾಗುವ ಕೆಲಸಗಳನ್ನು ಮಾಡುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ವಿಶ್ವಾಸವಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry