ಸೋಮವಾರ, ಜೂಲೈ 6, 2020
28 °C

ರೈತರು ಆತಂಕಗೊಳ್ಳುವ ಅಗತ್ಯವಿಲ್ಲ: ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸಗಿ: ‘ನಾರಾಯಣಪುರ ಎಡದಂಡೆ ಮುಖ್ಯಕಾಲುವೆಯ 61ನೇ ಕಿ.ಮೀ ಬಳಿ ಕಾಲುವೆ ಅಲ್ಪ ಪ್ರಮಾಣದಲ್ಲಿ ಊದಿಕೊಂಡಿದ್ದರೂ ರೈತರು ಆತಂಕ ಗೊಳ್ಳುವ ಅಗತ್ಯವಿಲ್ಲ’ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು. ಕಾಲುವೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಎರಡು ತಿಂಗಳ ಹಿಂದೆ ಇದೇ ಸ್ಥಳದ ಬಳಿ 50 ಮೀಟರ್‌ನಷ್ಟು ಕಾಲುವೆಯ ಆರ್‌ಸಿಸಿ ಲೈನಿಂಗ್ ಕುಸಿತಗೊಂಡಿತ್ತು. ಆದರೆ, ತಕ್ಷಣವೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಅದಕ್ಕೆ ಮರಳು ತುಂಬಿದ ಚೀಲಗಳನ್ನು ಇಟ್ಟು ಎಂದಿನಂತೆ ಕಾಲುವೆಗೆ ನೀರು ಹರಿಸಲಾಗಿತ್ತು. ಸದ್ಯ ಇದೇ ಸ್ಥಳದ ಬಳಿ ಅಂದಾಜು 30 ಮೀಟರ್‌ನಷ್ಟು ಕಾಲುವೆ ಊದಿಕೊಂಡಿದ್ದರೂ ಹಿಂಗಾರು ಹಂಗಾಮಿಗೆ ವಾರಬಂದಿಯಂತೆ ನೀರು ಹರಿಸುವಲ್ಲಿ ತೊಂದರೆ ಆಗುವ ಸಾಧ್ಯತೆಗಳಿಲ್ಲ’ ಎಂದು ತಿಳಿಸಿದರು.

ಬಳಿಕ ನಿಗಮದ ಮುಖ್ಯ ಎಂಜಿನಿಯರ್ ಕೃಷ್ಣೇಗೌಡ, ಎಸ್ಇ ಎಸ್.ಎ.ಹುದಲಿ ಅವರಿಗೆ ದೂರವಾಣಿಯಲ್ಲಿ ಮಾತನಾಡಿ, ‘ಹಗಲು ರಾತ್ರಿ ಎನ್ನದೇ ಜಾಗ್ರತೆವಹಿಸಿ ರೈತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಮುಂದಾಗಬೇಕು’ ಎಂದು ಹೇಳಿದರು. ಮುಖಂಡರಾದ ಸೂಲಪ್ಪ ಕಮತಗಿ, ವೆಂಕೊಬ ಯಾದವ, ಗುರುನಾಥಗೌಡ ಕರಿಬಾವಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.