ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೋರಾಟವನ್ನು ಹೊಸ ತಲೆಮಾರಿಗೆ ವರ್ಗಾಯಿಸಿ’

Last Updated 8 ಜನವರಿ 2018, 8:40 IST
ಅಕ್ಷರ ಗಾತ್ರ

ಬೆಳಗಾವಿ: ನೌಕರರ ಹಿತಕಾಪಾಡಲು 25 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಹೋರಾಟವನ್ನು ಮುಂದಿನ ತಲೆಮಾರಿಗೆ ವರ್ಗಾಯಿಸಬೇಕಾಗಿದೆ. ಯುವ ನೌಕರರನ್ನು ಒಳಗೊಂಡಂತೆ ಹೋರಾಟವನ್ನು ಇನ್ನಷ್ಟು ಬಲಪಡಿಸಬೇಕಾಗಿದೆ ಎಂದು ವಿಮಾ ನೌಕರರ ಸಂಘದ ಬೆಳಗಾವಿ ವಿಭಾಗದ ಪ್ರಧಾನ ಕಾರ್ಯದರ್ಶಿ ಪಿ.ಎ. ಜೋಸೆಫ್‌ ಹೇಳಿದರು.

ಇಲ್ಲಿನ ಗೋವಾವೇಸ್‌ ಬಳಿಯಿರುವ ಎಲ್‌ಐಸಿ ಕೇಂದ್ರ ಕಚೇರಿಯಲ್ಲಿ ಭಾನುವಾರ ನಡೆದ ಸಂಘದ ಬೆಳ್ಳಿ ಮಹೋತ್ಸವದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ನಮ್ಮ ಸಂಘವು ಕೇವಲ ವಿಮಾ ನೌಕರರಿಗಾಗಿ ಹೋರಾಟ ಮಾಡಲಿಲ್ಲ. ಇಡೀ ಕಾರ್ಮಿಕ ವರ್ಗದ ಹಿತ ಕಾಪಾಡಲು ಹೋರಾಟ ಮಾಡಿದೆ. ಅವರ ಬೇಡಿಕೆಗಳಿಗೆ ಸ್ಪಂದಿಸಿ ರಸ್ತೆಗಿಳಿದು ಹೋರಾಟ ಮಾಡಿದೆ. ಹೀಗಾಗಿ ನಮ್ಮ ಸಂಘಕ್ಕೆ ವಿಶೇಷ ಗೌರವವಿದೆ. ನಮ್ಮ ಸಂಘದ ಕೊಡುಗೆಯನ್ನು ಹಲವರು ಸ್ಮರಿಸುತ್ತಾರೆ’ ಎಂದು ಹೇಳಿದರು.

‘ನೌಕರರ ರಕ್ಷಣೆಯ ಗುರಿ ಇಟ್ಟುಕೊಂಡು ಆರಂಭವಾದ ಈ ಹೋರಾಟವು ಈಗಲೂ ಅದೇ ದಾರಿಯಲ್ಲಿ ಸಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಚಟುವಟಿಕೆಗಳನ್ನು ತೀವ್ರಗೊಳಿಸಬೇಕಾಗಿದೆ. ಬೆಳ್ಳಿ ಮಹೋತ್ಸವದ ವರ್ಷವಿಡೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಯುವನೌಕರರು ಹೆಚ್ಚೆಚ್ಚು ಪಾಲ್ಗೊಳ್ಳಬೇಕು’ ಎಂದು ನುಡಿದರು.

‘ಬೀದಿಗಿಳಿದು ಹೋರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಸದಸ್ಯರು ಉತ್ಸಾಹ ಭರಿತರಾಗಿ ಘೋಷಣೆಗಳನ್ನು ಮೊಳಗಿಸುತ್ತಾರೆ. ಅದೇ ಉತ್ಸಾಹವು ಸಂಘದ ಚಟುವಟಿಕೆಗಳಲ್ಲಿಯೂ ಕಾಣಬೇಕು’ ಎಂದು ತಿಳಿಸಿದರು.

ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘದ ಸದಸ್ಯ ಫ್ರಾನ್ಸಿಸ್‌ ಫರ್ನಾಂಡೀಸ್‌ ಮಾತನಾಡಿ, ‘ಇಂದಿನ ಸರ್ಕಾರಗಳು ನೌಕರರ ದಮನ ನೀತಿಗಳನ್ನು ಅನುಸರಿಸುತ್ತಿವೆ.ಉನ್ನತ ಶಿಕ್ಷಣ ಪಡೆದಿದ್ದರೂ ಉದ್ಯೋಗ ದೊರೆಯದಿದ್ದಾಗ ಯುವಕರು ಅಡ್ಡದಾರಿ ಹಿಡಿಯುವ ಅಪಾಯ ಹೆಚ್ಚು. ದರೋಡೆ, ಕಳ್ಳತನ, ಕೊಲೆ, ಸುಲಿಗೆ ಮಾಡುವಂತಹ ಸ್ಥಿತಿ ಎದುರಾಗಬಹುದು. ಸಾಮಾಜಿಕ ಸ್ಥಿತಿ ಹದೆಗೆಡುವ ಪರಿಸ್ಥಿತಿ ಬರಬಹುದು’ ಎಂದು ಹೇಳಿದರು.

‘ನಾವು ಅತ್ಯಂತ ಕಷ್ಟದಲ್ಲಿ ಶಿಕ್ಷಣ ಪಡೆದುಕೊಂಡಿದ್ದೆವು. ಬಹಳ ಪರಿಶ್ರಮ ಪಟ್ಟು ಉದ್ಯೋಗ ಗಿಟ್ಟಿಸಿಕೊಂಡೆವು. ನಂತರ ಸಂಘಟಿತರಾಗಿ ಹೋರಾಟ ಮಾಡಿದೇವು. ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಂಡೆವು. ಅಂದು ನಮಗೆ ಇದ್ದಂತಹ ಕ್ಲಿಷ್ಟಕರ ಸ್ಥಿತಿ ಇಂದಿನ ಯುವಜನತೆಗೆ ಇಲ್ಲ. ಹೀಗಾಗಿ ಸಂಘದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವರು ಮುಂದೆ ಬರುತ್ತಿಲ್ಲ. ಅವರ ಮನವೊಲಿಸಿ, ಸಂಘದ ಚಟುವಟಿಕೆಗಳಲ್ಲಿ ಕರೆತರಬೇಕು’ ಎಂದು ತಿಳಿಸಿದರು. 

ವಿಮಾ ನೌಕರರ ಸಂಘದ ಬೆಳಗಾವಿ ಘಟಕದ ಅಧ್ಯಕ್ಷ ಜಿ.ವಿ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕಿ ರಾಜಲಕ್ಷ್ಮೀ ಕುಲಕರ್ಣಿ, ಸಿಐಟಿಯು ಸದಸ್ಯರಾದ ಆರ್‌.ಎಚ್‌. ಆಯಿ ಭಾಗವಹಿಸಿದ್ದರು.

* * 

ಆಧುನಿಕ ಯಂತ್ರಗಳನ್ನು ಅಳವಡಿಸುವ ಮೂಲಕ ನೌಕರರ ಸಂಖ್ಯೆಯನ್ನು ಕಡಿತ ಗೊಳಿಸಲಾಗುತ್ತಿದೆ. ಯುವಪೀಳಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ
ಫ್ರಾನ್ಸಿಸ್‌ ಫರ್ನಾಂಡಿಸ್‌ ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘದ ಸದಸ್ಯ</p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT